Advertisement

ವ್ಯಾಪಕ ಮಳೆ: ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆ

10:44 PM Aug 04, 2020 | Hari Prasad |

ಬಂಟ್ವಾಳ: ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

Advertisement

ಇದರ ಪರಿಣಾಮ ಕರಾವಳಿಯ ಜೀವನದಿ ನೇತ್ರಾವತಿ ಯಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.

ಮಂಗಳವಾರ ರಾತ್ರಿ 9.30ರ ಸುಮಾರಿಗೆ ಬಂಟ್ವಾಳದಲ್ಲಿ ನೀರಿನ ಮಟ್ಟ 6.40 ಮೀಟರ್ ಗೆ ಏರಿಕೆಯಾಗಿದೆ.

ಬಂಟ್ವಾಳದಲ್ಲಿ ನೀರಿನ ಅಪಾಯಕಾರಿ ಮಟ್ಟ 8.50 ಮೀಟರ್ ಆಗಿದ್ದು, ಈ ಮಟ್ಟಕ್ಕೆ ನೀರು ಏರಿಕೆಯಾದಲ್ಲಿ ತಾಲೂಕಿನ ಸಾಕಷ್ಟು ಪ್ರದೇಶ ಮುಳುಗಡೆಯಾಗಲಿದೆ.

ಸದ್ಯಕ್ಕೆ ನೀರಿನ ಮಟ್ಟ ಅಪಾಯಕಾರಿ ಮಟ್ಟದಿಂದ ಸಾಕಷ್ಟು ಕೆಳಗಿದ್ದರೂ, ಮಳೆ ತ್ರೀವ್ರಗೊಂಡಲ್ಲಿ ನೀರಿನ ಮಟ್ಟವೂ ಏರಿಕೆಯಾಗಬಹುದೆಂಬ ಭಯ ಸ್ಥಳಿಯರಲ್ಲಿ ಮೂಡಿದೆ.

Advertisement

ಬಂಟ್ವಾಳದ ಗೂಡಿನಬಳಿ ಪ್ರದೇಶದಲ್ಲಿ ಮಾಪನದ ಮೂಲಕ ಬಂಟ್ವಾಳ ತಾಲೂಕು ಆಡಳಿತದಿಂದ ನೀರಿನ ಮಟ್ಟ ಪರಿಶೀಲಿಸಲಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ ನದಿ ನೀರಿನ ಮಟ್ಟ 5.9 ಮೀಟರ್ ಇದ್ದು, ಸಾಯಂಕಾಲದ ವೇಳೆಗೆ 6 ಮೀಟರ್ ಗೆ ಏರಿಕೆಯಾಗಿತ್ತು. ಪ್ರಸ್ತುತ ರಾತ್ರಿ 9.30ರ ವೇಳೆಗೆ 6.40 ಮೀಟರ್ ಗೆ ನದಿ ನೀರಿ ಮಟ್ಟ ಏರುತ್ತಿರುವುದು ನದಿಗೆ ಭಾರೀ ಪ್ರಮಾಣದಲ್ಲಿ ನೀರಿನ ಹರಿವನ್ನು ಸೂಚಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next