Advertisement

ಬಿಸಿಲಿನಿಂದ ಬೆಂದಿದ್ದ ರಾಯಚೂರಿನಲ್ಲಿ ಭಾರೀ ವರ್ಷಧಾರೆ: ರೈತರಲ್ಲಿ ಹರ್ಷ, ಹಲವರಿಗೆ ಸಂಕಷ್ಟ

05:52 PM May 30, 2020 | keerthan |

ರಾಯಚೂರು: ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಶನಿವಾರ ಬೆಳಗಿನ ಜಾವ ಸುರಿದ ಭಾರೀ ವರ್ಷಧಾರೆ ತಂಪೆರೆದರೆ, ಮುಂಗಾರು ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೂ ಖುಷಿ ತಂದಿದೆ. ಆದರೆ, ನಗರ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಾನಾ ಅವಾಂತರ ಸೃಷ್ಟಿಸಿದೆ.

Advertisement

ರಾತ್ರಿ ಎರಡೂವರೆ ಸುಮಾರಿಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಶುರುವಾದ ಮಳೆ ಬೆಳಗಿನ ಜಾವದರೆಗೂ ಸುರಿಯಿತು. ಕಲಮಲಾ ಹೋಬಳಿಯಲ್ಲಿ 148.5 ಮಿಮೀ ಮಳೆ ದಾಖಲಾಗುವ ಮೂಲಕ ಅತಿ ಹೆಚ್ಚು ಪ್ರಮಾಣದ ಮಳೆ ಬಿದ್ದಿದೆ. ಇನ್ನೂ ಜಮೀನುಗಳಲ್ಲಿ ನೀರು ಸಂಗ್ರಹಗೊಂಡು ಬದುಗಳು ಒಡೆದು ಹೋಗಿದೆ. ಈಗಾಗಲೇ ಭೂಮಿ ಹದ ಮಾಡಲು ಕಾದು ಕುಳಿತ ರೈತರಿಗೆ ಈ ಮಳೆ ಪೂರಕವಾಗಿದೆ.

ನಗರದ ಸಿಯಾತಲಾಬ್, ಮಡ್ಡಿಪೇಟೆ, ಎಲ್‌ಬಿಎಸ್ ನಗರ, ಶಕ್ತಿನಗರದ ಲೇಬರ್ ಕಾಲನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ನಾನಾ ಅವಾಂತರ ಸೃಷ್ಟಿಸಿದೆ. ಈ ಪ್ರದೇಶಗಳು ತಗ್ಗಿನಲ್ಲಿದ್ದು, ಸ್ವಲ್ಪ ಮಳೆ ಬಂದರೂ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಜಾಗರಣೆ ಕಾಯಂ ಎನ್ನುವಂತಾಗಿದ್ದು, ಶನಿವಾರವೂ ನೀರು ಎತ್ತಿ ಹಾಕುವ ಕಾಯಕ ಶುರುವಾಗಿತ್ತು. ಸಿಯಾತಲಾಬ್ ಬಡಾವಣೆಯಲ್ಲಿ ಚರಂಡಿ ನೀರು ಮಿಶ್ರಣಗೊಂಡು ಮನೆಗಳಿಗೆ ನುಗ್ಗಿವೆ. ಮನೆ ಬಳಕೆ ವಸ್ತುಗಳು, ಪಾತ್ರೆ ಪಗಡೆ, ದವಸ ಧಾನ್ಯಗಳೆಲ್ಲ ನೀರು ಪಾಲಾದವು. ಎಲ್ ಬಿಎಸ್ ನಗರದಲ್ಲಿ ಮಳೆಗೆ ನೆನೆದು ಮನೆ ಗೋಡೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next