ರಾಯಗಢ,ಜೂ.19: ರಾಯಗಢ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಕುಂಡಲಿಕಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ರೋಹಾ ತಾಲೂಕಿನಲ್ಲಿ ಹೈ ಅಲರ್ಟ್ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಪ್ರತಿವರ್ಷ ಮಳೆಗಾಲದಲ್ಲಿ, ರಾಯಗಢ ಜಿಲ್ಲೆಯು ಪ್ರವಾಹದಂತಹ ಪರಿಸ್ಥಿತಿಗಳನ್ನು ಎದುರಿಸಬೇ ಕಾಗುತ್ತದೆ. ಆದರೆ ಪ್ರಸಕ್ತ ಮಾನ್ಸೂನ್ ಜಿಲ್ಲೆಯನ್ನು ಪ್ರವೇಶಿಸಿದ್ದು ಭಾರೀ ಮಳೆಯಿಂದಾಗಿ ಕೆಲವು ಪರಿಸರ ಜಲಾವೃತಗೊಂಡಿದೆ. ರೋಹಾ ತಾಲೂಕಿನ ಅಪಾಯವನ್ನು ಗಮನ ದಲ್ಲಿಟ್ಟುಕೊಂಡು ನದಿತೀರದ ಮತ್ತು ಕರಾವಳಿ ತೀರದ ಹಳ್ಳಿಗಳಿಗೆ ಆಡಳಿತವು ಹೆಚ್ಚಿನ ಎಚ್ಚರಿಕೆ ನೀಡಿದೆ.
ಭಿರಾ ಟಾಟಾ ಪವರ್‌ನಿಂದ ಬಿಡುಗ ಡೆಯಾದ ನೀರಿನಿಂದ ನದಿಯ ನೀರಿನ ಮಟ್ಟವು ಅಪಾಯದ ಮಟ್ಟಕ್ಕೆ ತಲುಪಿದೆ. ಆದ್ದರಿಂದ ಆಡಳಿ ತವು ಎಚ್ಚರಿಕೆ ನೀಡಿದೆ. ಅಲ್ಲದೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವಲೋಕನದ ಪ್ರಕಾರ, ರೋಹಾ ತಾಲೂಕಿನ ಮೂಲಕ ಹರಿಯುವ ಕುಂಡಲಿಕಾ ನದಿಯ ಅಪಾಯದ ಮಟ್ಟವು ಡೋಲ್ವಾಹಲ್ ಅಣೆಕಟ್ಟಿನಲ್ಲಿ 23.95 ಮೀ.ಗಳಷ್ಟಿದ್ದು ಪ್ರಸಕ್ತ ಮಳೆಯಿಂದಾಗಿ ನೀರಿನ ಮಟ್ಟ 22.23ಮೀ.ಗೆ ತಲುಪಿದೆ.
ಅದಲ್ಲದೆ ಜಿಲ್ಲೆಯ ಇತರ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಆಬ್ ನದಿಯ ಅಪಾಯದ ಮಟ್ಟ 9 ಮೀ. ಆದ್ದರಿಂದ, ಪ್ರಸ್ತುತ ನೀರಿನ ಮಟ್ಟ 7.20 ಮೀ. ಗೆ ತಲುಪಿದೆ. ಸಾವಿತ್ರಿ ನದಿಯ ಅಪಾಯದ ಮಟ್ಟ 6.20 ಮೀ.ಗಳಷ್ಟಿದ್ದು ಪ್ರಸ್ತುತ ನೀರಿನ ಮಟ್ಟವು 3.20 ಮೀ. ರಷ್ಟು ತಲುಪಿದೆ. ಪಾಟಲ್‌ಗಂಗಾ ನದಿಯ ಅಪಾಯದ ಮಟ್ಟ 21.52 ಮೀ. ಗಳಷ್ಟಿದ್ದು, ಪ್ರಸ್ತುತ ಮಟ್ಟವು 17.95 ಮೀ.ಗಳಷ್ಟಕ್ಕೆ ತಲುಪಿದೆ. ಉಲ್ಲಾಸ್ ನದಿಯ ಅಪಾಯದ ಮಟ್ಟ 48.87 ಮೀ. ಗಳಷ್ಟು ಹೊಂದಿದ್ದು ಆದ್ದರಿಂದ, ಪ್ರಸ್ತುತ ಮಟ್ಟವು 42.60 ಮೀ. ಗೆ ತಲುಪಿದೆ.