Advertisement

ಪಿರಿಯಾಪಟ್ಟಣದಲ್ಲಿ ಭಾರಿ ಮಳೆ: ಮರ ಮುರಿದು ಬಿದ್ದು ಮಹಿಳೆ ಸಾವು

07:50 PM Apr 01, 2022 | Team Udayavani |

ಪಿರಿಯಾಪಟ್ಟಣ: ಭಾರಿ ಗಾಳಿ ಮಳೆಯ ಪರಿಣಾಮ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

Advertisement

ತಾಲೂಕಿನ ಹೆಚ್.ಮಠದಕೊಪ್ಪಲು ಗ್ರಾಮದ ಸ್ವಾಮಿ ಎಂಬುವರ ಪತ್ನಿ ಪುಟ್ಟಮ್ಮ (30) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ಅವಘಡ ನಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಟ್ಟದಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಗಾಳಿ ಬೀಸಿದ ಪರಿಣಾಮ ರಾವಂದೂರು ಗ್ರಾಮದ ಸಂದೀಪ್ ರವರ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ವಿದ್ಯುತ್ ಕಂಬದ ಮೇಲೆ ಸಿಲುಕಿದೆ. ಅಕ್ಕಪಕ್ಕದ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ರಾವಂದೂರಿನ ಸುತ್ತಮುತ್ತ ಹಲವಾರು ಮರಗಳು ವಿದ್ಯುತ್ ಕಂಬಗಳು
ಮುರಿದುಬಿದ್ದಿವೆ.  ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ನೌಕರರು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next