Advertisement
ತಾಲೂಕಾದ್ಯಂತ ರೈತರು ಭತ್ತ, ಮೆಕ್ಕೆಜೋಳ, ಹತ್ತಿ, ಕಬ್ಬು ಬೆಳೆಯಲಾಗಿದೆ. ರೈತರು ಉಳುಮೆ, ಬೀಜ ಬಿತ್ತನೆ, ಗೊಬ್ಬರ, ಔಷ ಧ, ಕಳೆ ತೆಗೆಯುವ ಮುಂತಾದ ಬೇಸಾಯ ಚಟುವಟಿಕೆಗೆ ಸಹಕಾರಿ ಸಂಘ, ಸೊಸೈಟಿ ಮತ್ತು ಕೈಸಾಲ ಮಾಡಿಕೊಂಡು ಬೆಳೆ ಬೆಳೆದಿರುವ ರೈತರಿಗೆ ಅಕಾಲಿಕ ಮಳೆ ಮತ್ತು ಪ್ರಕೃತಿ ವಿಕೋಪದಿಂದ ಬಹುತೇಕ ಕಡೆಗಳಲ್ಲಿ ಭತ್ತದ ಬೆಳೆ ನಾಶಕ್ಕೆ ಕಾರಣವಾಗಿದೆ.
ಕದರುಗಳು ಉದುರಿ, ಗದ್ದೆಯಲ್ಲಿ ನೀರು ನಿಂತು ಸಂಪೂರ್ಣವಾಗಿ ಭತ್ತದ ಪೈರು ನೀರಿನಲ್ಲಿ ಮಣ್ಣಿಗೆ ಅಂಟಿಕೊಂಡಿದ್ದು, ಇಂದು ರೈತರು ಭತ್ತದ ಬೆಳೆಯ ಆಶೆಯನ್ನು ಸಂಪೂರ್ಣ ಕೈಚಲ್ಲಿ ಚಿಂತಾಕ್ರಾಂತರಾಗಿದ್ದಾರೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಹಾನಿಯಾಗಿದ್ದು ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರಕಾರ ತಕ್ಷಣ ಪರಿಹಾರ ನೀಡಲಿ: ಕೃಷಿಯಿಂದಲೇ ಜೀವನ ನಡೆಸುವ ಸಾವಿರಾರು ಕುಟುಂಬಗಳು ಇದೀಗ ಮಳೆಯಿಂದ ಬೆಳೆ ಹಾನಿ ಮಾಡಿಕೊಂಡು ನಷ್ಟದಲ್ಲಿವೆ. ಆದ್ದರಿಂದ ಇಂತಹ ಕುಟುಂಬಗಳಿಗೆ ಸರಕಾರ ಬೆಳೆ ಹಾನಿ ಪರಿಹಾರವನ್ನು ಕೂಡಲೇ
ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಇಂತಹ ಸ್ಥಿತಿ ಎದುರಾಗಿ ದೇಶದಲ್ಲಿ ಶೇ.9.7ರಷ್ಟು ರೈತರು ಆತ್ಮಹತ್ಯೆ
ಮಾಡಿಕೊಂಡಿದ್ದು ಅದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿತ್ತು. ಇಂತಹ ಸ್ಥಿತಿ ಮರುಕಳಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.