ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು. ಕೃಷ್ಣಾ ನದಿಗೆ 2.16 ಕ್ಯೂಸೆಕ್ ನೀರು ಹರಿದು ಬರುತ್ತದೆ. ಚಿಕ್ಕೋಡಿ ಉಪವಿಭಾಗದ ಮತ್ತೆರಡು ಸೇತುವೆ ಮುಳುಗಡೆಯಾಗಿವೆ.
ದೂಧಗಂಗಾ ಮತ್ತು ವೇಧಗಂಗಾ ನದಿಯ ಪಾತ್ರದ ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹ ಉಂಟಾಗಿದೆ. ನದಿ ನೀರು ತನ್ನ ಬಾಹು ವಿಸ್ತರಿಸಕೊಂಡು ಗ್ರಾಮಗಳತ್ತ ನುಗ್ಗಿದೆ.
ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಸದಲಗಾ- ಭೋರಗಾಂವ. ಯಕ್ಸಂಬಾ- ಧಾನವಾಡ ಸೇತುವೆ ಶುಕ್ರವಾರ ಬೆಳಿಗ್ಗೆ ಮುಳುಗಡೆಗೊಂಡು ಸಂಪರ್ಕ ಸ್ಥಗಿತಗೊಂಡಿವೆ.
ದಿನದಿಂದ ದಿನಕ್ಕೆ ಕೃಷ್ಣಾ. ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ ಮೂಲಕ ಕೃಷ್ಣಾ ನದಿಗೆ 1.78 ಲಕ್ಷ ಕ್ಯೂಸೆಕ್ ನೀರು ಬಂದರೆ ದೂಧಗಂಗಾ ನದಿ ಮೂಲಕ 38 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 2.16 ಲಕ್ಷ ಕ್ಯೂಸೆಕ್ ನೀರು ಬರುತ್ತದೆ. ದೂಧಗಂಗಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಉಲ್ಬಣಗೊಂಡಿದೆ. ನದಿ ನೀರು ಹುನ್ನರಗಿ.
ಬಾರವಾಡ.ಕಾರದಗಾ.ಬೋಜ. ಭೀವಸಿ.ಜತ್ರಾಟ ಗ್ರಾಮಗಳಲ್ಲಿ ಸುತ್ತು ಹಾಕಿದೆ. ಇತ್ತ ಕೃಷ್ಣಾ ನದಿಯ ವ್ಯಾಪ್ತಿಯ ಕಲ್ಲೋಳ. ಚೆಂದೂರ. ಯಡೂರವಾಡಿ. ಮಾಂಜರಿ. ಇಂಗಳಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ: Tamil Nadu: ಹೃದಯಾಘಾತಗೊಂಡರೂ ಶಾಲಾ ಮಕ್ಕಳ ಜೀವ ಉಳಿಸಿ ಬಸ್ಸಿನಲ್ಲೇ ಪ್ರಾಣ ಬಿಟ್ಟ ಚಾಲಕ