Advertisement
ಕುರುಗೋಡು ತಾಲೂಕಿನ ಸುತ್ತಮುತ್ತ ಗ್ರಾಮಗಳ ನಡುಗದ್ದೆಯಲ್ಲಿ ಮೇಕೆಗಳು ಮತ್ತು ಗೋವುಗಳು ಸಿಲುಕಿವೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಮೇಕೆಗಳು ನಡುಗದ್ದೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಮೇವು ಸಿಗುತ್ತಿರುವುದು ಅಷ್ಟಕಷ್ಟೇ. ಈಗಾಗಲೇ ಮೆಳೆ ಚಳಿಗೆ ಕೆಲ ಮೇಕೆಗಳು ಸಾಯುವ ಪರಿಸ್ಥಿತಿಗೆ ಬಂದೋಗಿವೆ ಎನ್ನಲಾಗಿದೆ. ಮೇವು ಇಲ್ಲದೆ ಮೇಕೆಗಳು ಮತ್ತು ಗೋವುಗಳು ನಿತ್ರಾಣಗೊಂಡಿವೆ.
Related Articles
Advertisement
25 ಮೇಕೆಗಳು ಸಾವು
ದಿನ ವಿಡಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತ ಗೊಂಡಿದ್ದಲ್ಲದೆ ಮೂಕ ಪ್ರಾಣಿಗಳ ಗೋಳು ತೀವ್ರ ಸಂಕಷ್ಟಕ್ಕೆ ಹಿಡಾಗಿದೆ. ಮಳೆ ಬಂದ ಹಿನ್ನಲೆ ಚಳಿಗೆ ರಾಯಭಾಗ ಮೂಲದ ಸಚ್ಚಿ ಹೊಡೆಯರ್ ಎಂಬ ಕುರುಬ ರೈತನ ಸುಮಾರು 25 ಕುರಿಗಳು ಸಾವನ್ನಪ್ಪಿವೆ. ಆದ್ದರಿಂದ ಕುರಿಗಾಹಿಗಳು ಇನ್ನುಳಿದ ಕುರಿಗಳನ್ನು ಉಳಿಸಿಕೊಳ್ಳಲು ಸುರಿಕ್ಷಿತ ಸ್ಥಳಕ್ಕೆ ಗಂಟು ಮೂಟೆ ಕಟ್ಟಿಕೊಂಡು ಊರು ಊರು ಅಲೆದಾಡುತ್ತಿದ್ದಾರೆ.
ಮಳೆಯಿಂದಾಗಿ ಸೃಷ್ಟಿಯಾಗಿರುವ ಅವಾಂತರ ಅಷ್ಟಿಷ್ಟಲ್ಲ. ಬೆಳೆ ಹಾನಿಯಾಗಿದೆ. ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮನೆಯಿಂದ ಜನ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಮಳೆ ನಿಂತರೆ ಸಾಕು ಎಂಬ ಸ್ಥಿತಿಯಲ್ಲಿ ಜನರಿದ್ದಾರೆ.