Advertisement
ಮಂಗಳವಾರ ಮಧ್ಯರಾತ್ರಿಯಿಂದ ಸುರಿದ ಮಳೆಯಿಂದಾಗಿ ಬುಧವಾರ ಇಡೀ ದಿನ ಮಳೆ ನೀರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹೊಲ, ತೋಟಗಳಿಗೆ ನುಗ್ಗಿತು. ಮಳೆ ನೀರು ಹರಿಯುವ ಕಾಲುವೆ ಹಾಳು ಮಾಡಿದ್ದೇ ಕಾರಣವೆಂಬ ದೂರುಕೇಳಿ ಬಂದಿದೆ.
ಪರಿಣಾಮ ಈ ಭಾಗದಲ್ಲಿ ಬೆಳೆ ಹಾನಿ ಹೆಚ್ಚಾಗಿದೆ.
Related Articles
Advertisement
ಇದನ್ನೂ ಓದಿ:ಕೇರಳದಲ್ಲಿ ಸೋಂಕು ಏರಿಕೆ : ಇದು ಸರ್ಕಾರದ ಅಸಲಿ ಮುಖವನ್ನು ತೋರಿಸುತ್ತದೆ : ಥಾಮಸ್
ರಾಗಿ ಬೆಳೆಗೂ ಹಾನಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಸಮಾಧಾನಕರವಾಗಿ ಸುರಿಯುತ್ತಿರುವುದರಿಂದ ರೈತರು ತಮ್ಮ ಹೊಲಗಳನ್ನು ಹದಪಡಿಸಿಕೊಂಡು ರಾಗಿ ಹಾಕಿದ್ದರು. ಆದರೆ ಹೊಲಗಳಲ್ಲಿಯೇ ಯಥೇತ್ಛವಾಗಿ ನೀರು ಹರಿದು ಪೈರನ್ನು ಮಲಗಿಸಿದೆ. ನರಸಾಪುರ ಮತ್ತು ಸುಗಟೂರು ಭಾಗದಲ್ಲಿಯೇ ನೂರಾರು ಎಕರೆ ರಾಗಿ ಬೆಳೆ ನೀರಿನಿಂದ ಆವೃತವಾಗಿ ಹಾನಿಯಾಗಿದೆ.
ಮತ್ತೆ ಮಳೆಯಾದರೆ ಮತ್ತಷ್ಟು ಹಾನಿ: ಇದೇ ರೀತಿಯ ಮಳೆ 2-3 ದಿನ ಮುಂದುವರಿದರೆ ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ. ಇನ್ನು ಮಂಗಳವಾರದ ಹಾನಿ ಕುರಿತು ಅಧಿಕಾರಿಗಳು ಅಂದಾಜುಪಟ್ಟಿ ಸಿದ್ಧಪಡಿಸಲು ಮುಂದಾಗಿದ್ದು, ಒಂದೆರೆಡು ದಿನಗಳಲ್ಲಿ ಸ್ಪಷ್ಟ ಚಿತ್ರಣಸಿಗಲಿದೆ.
ಕಟ್ಟಡಗಳು ಜಲಾವೃತ: ಹೊಲ ತೋಟಗಳಲ್ಲಿ ರೈತರು ನಿರ್ಮಿಸಿಕೊಂಡಿದ್ದ ಮನೆಗಳಿಗೂ ಸುಗಟೂರು ಭಾಗದಲ್ಲಿ ನೀರು ನುಗ್ಗಿವೆ. ಕೆಲವು ಕಟ್ಟಡಗಳಿಂದ ಜನ ಹೊರಬಾರದಂತೆ ನೀರು ನಿಂತಿರುವುದು ಕಂಡು ಬಂಬದೆ. ಬುಧವಾರ ಬೆಳಗ್ಗೆ 10 ಗಂಟೆ ನಂತರ ಮಳೆ ಬಿಡುವು ನೀಡಿದ್ದರಿಂದ ಒಂದಷ್ಟು ಹಾನಿ ಪ್ರಮಾಣ ಕಡಿಮೆಯಾಗಿತ್ತು. ಬುಧವಾರ ರಾತ್ರಿಯೂ ಇದೇ ರೀತಿ ಮಳೆ ಸುರಿದಂತೆ ಮತ್ತಷ್ಟು ಹಾನಿ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಒತ್ತುವರಿಯೇ ಕಾರಣ: ಪ್ರತಿ 10ವರ್ಷಗಳ ಅವಧಿಯಲ್ಲಿ ಒಂದೆರೆಡು ಬಾರಿ ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತದೆ. ಕೆರೆ ಕುಂಟೆ ತುಂಬಿ ಹರಿಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆಕುಂಟೆಗಳಿಗೆ ಮಳೆ ನೀರನ್ನು ಹರಿಸುವ ಕಾಲುವೆಗಳನ್ನು ರೈತಾಪಿ ವರ್ಗವೇ ದುರಾಸೆಯಿಂದ ಒತ್ತುವರಿ ಮಾಡಿಕೊಂಡು ಹಾಳುಗೆಡವಿದ್ದಾರೆ
ರೈತರ ಗಾಯದ ಮೇಲೆ ಬರೆ:ಹೊಲ ಗದ್ದೆಗಳ ಗೆನುಮೆಗಳನ್ನು ಗುರುತಿಸಲಾರದಷ್ಟು ಹಾನಿ ಮಾಡಲಾಗಿದೆ. ಇವೆಲ್ಲದರ ಪರಿಣಾಮ ಕಾಲುವೆಗಳಲ್ಲಿ ಹರಿಯಬೇಕಾದ ಮಳೆ ನೀರು ಏಕಾಏಕಿ ಹೊಲ ತೋಟ, ಮನೆಗಳಿಗೆ ನುಗ್ಗುತ್ತಿದೆ ಎಂದು ರೈತರೇ ದೂರುತ್ತಿದ್ದಾರೆ. ಒಟ್ಟಾರೆ ಮಳೆ ನೀರು ಬರಪೀಡಿತ ಜಿಲ್ಲೆಯಲ್ಲಿ ಬೆಳೆ ಹಾನಿ ಮಾಡುವಷ್ಟು ಸುರಿಯುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ನೂರಾರು ಎಕರೆಕೃಷಿ ಮತ್ತು ತೋಟಗಾರಿಕೆ ಬೆಳೆಗಳುಹಾನಿಯಾಗಿವೆ.ಆದರೆ,ಇದರಲ್ಲಿ ಮಳೆಪಾತ್ರ ಶೇ.10 ಮಾತ್ರ. ರೈತರುಇನ್ನಾದರೂ ಮಳೆ ನೀರುಹರಿಯುವಕಾಲುವೆಮತ್ತಿತರ ವಿನ್ಯಾಸಗಳ ಒತ್ತುವರಿ ಮಾಡದಿರಲಿ.
– ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ, ರೈತ ಸಂಘ.