Advertisement

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

07:46 PM Jul 11, 2021 | Team Udayavani |

ಕೆರೂರ: ಪುನರ್ವಸು ಮಳೆ ಶುಕ್ರವಾರ ಮಧ್ಯಾಹ್ನದಿಂದ ಪಟ್ಟಣದಲ್ಲಿ ಎಡೆಬಿಡದೇ ಸುರಿದ ಪರಿಣಾಮ ಸ್ಥಳೀಯ ತರಕಾರಿ, ಕಿರಾಣಿ ಮಾರ್ಕೆಟ್‌ ಆವರಣ ಜಲಾವೃತಗೊಂಡಿದೆ. ಗ್ರಾಹಕರು, ವರ್ತಕರು ಮಳೆಯ ನೀರಲ್ಲೇ ಸಂಚರಿಸುವಂತಾಗಿದೆ. ಮಾರ್ಕೆಟ್‌ ಆವರಣ ಮಳೆ ನೀರಿನಿಂದ ಆವೃತವಾಗುವುದು ಸಾಮಾನ್ಯವಾಗಿದೆ.

Advertisement

ವಹಿವಾಟಿಗೆ ಬರುವ ಗ್ರಾಹಕರು, ವ್ಯಾಪಾರಿಗಳು ಹಾಗೂ ತರಕಾರಿ ವರ್ತಕರು ಮಳೆಯ ನೀರಿನೊಂದಿಗೆ ಚರಂಡಿಗಳಲ್ಲಿ ಹರಿದು ಬರುವ ದುರ್ನಾತದ ಮಲೀನ ನೀರಿನಲ್ಲೇ ವ್ಯಾಪಾರ ನಿರ್ವಹಿಸಬೇಕಾಗಿದೆ ಎಂದು ಬಟ್ಟೆ ವ್ಯಾಪಾರಿ ಕುಮಾರ ಹಕ್ಕಾಪಕ್ಕಿ ಹಾಗೂ ಗಂಗಾಧರ ಬೇಸರ ವ್ಯಕ್ತಪಡಿಸಿದ್ದಾರೆ.

ಗಣೇಶ ಕಟ್ಟೆ ಎದುರು ಮಳೆ ನೀರು: ದೂರದ ಹೊರವಲಯದ ನವನಗರ, ನೆಹರುನಗರ ಮೂಲಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಚರಂಡಿ ಮೂಲಕ ಹರಿದು ತ್ಯಾಜ್ಯದ ಮಲೀನ ನೀರು ಹಾಗೂ ಕುಂಬಾರ ಓಣಿ, ಹರಣಶಿಕಾರಿ ಇತರೆ ಗಲ್ಲಿಗಳ ಚರಂಡಿ ನೀರು ಸಹ ಮಳೆಯ ನೀರಿನೊಂದಿಗೆ ಸೇರಿ ಮಾರ್ಕೆಟ್‌ ಆವರಣವನ್ನು ವ್ಯಾಪಿಸುತ್ತಿದೆ. ಇದರಿಂದ ಅಲ್ಲಿ ದುರ್ನಾತ ಸಾಮಾನ್ಯವಾಗಿದ್ದು, ನಾಗರಿಕರು ವರ್ತಕರಲ್ಲಿ ಮಾರಕ ರೋಗಗಳ ಭೀತಿ ಕಾಡುತ್ತಿದೆ.

ಹದವಾದ ಮಳೆ, ಕೃಷಿ ಚುರುಕು: ಮುಂಗಾರು ಹಂಗಾಮಿನ ರೋಹಿಣಿ ಮಳೆ ಉತ್ತಮವಾಗಿ ಸುರಿದ ಪರಿಣಾಮ ಕೃಷಿಕರಿಗೆ ಬಿತ್ತನೆಗೆ ಹೆಚ್ಚು ಅನುಕೂಲವಾಗಿದೆ. ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆರಾಯ ಮುಂಗಾರು ಬೆಳೆಗಳಿಗೆ ಮರುಜೀವ ನೀಡಿದೆ. ಈ ಬಾರಿ ನಮ್ಮ ಹೊಲದಲ್ಲಿ ಉತ್ತಮ ಫಸಲು ನಿರೀಕ್ಷಿಸಿದ್ದೇವೆ ಎಂದು ಎಂದು ರೈತ ಸುರೇಶ ಮದಿ ಅವರು ಸಂತಸದಿಂದ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next