Advertisement

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

12:46 PM Sep 30, 2023 | Team Udayavani |

ಪಣಜಿ: ಸದ್ಯ ಗೋವಾ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ದಶಕದಲ್ಲಿ ಮೂರನೇ ಅತಿ ಹೆಚ್ಚು ಮಳೆ ಈ ವರ್ಷ ಸಂಭವಿಸಿದೆ. ಇದರಿಂದಾಗಿ ಕೆಲವೆಡೆ ಮರಗಿಡಗಳು ಉರುಳುತ್ತಿರುವ ಹಾಗೂ ಭೂ ಕುಸಿತದ ಘಟನೆಗಳೂ ಹೆಚ್ಚಿವೆ.

Advertisement

ಗೋವಾ ವಾಸ್ಕೊ ಸಡಾ ರುಮಡಾವಾಡಾ ಮಸೀದಿ ಬಳಿ ಭೂಕುಸಿತವಾಗಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಭೂ ಕುಸಿತದಿಂದಾಗಿ ಗುಡ್ಡದ ಮೇಲಿದ್ದ ಮನೆಯ ಶೌಚಾಲ ಗುಡ್ಡದ ಕೆಳಭಾಗದಲ್ಲಿದ್ದ ಮತ್ತೊಂದು ಮನೆಯ ಮೇಲೆ ಬಿದ್ದಿದೆ.

ಶನಿವಾರ ಮುಂಜಾನೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.  ಮುರಗಾಂವ ನಗರಸಭಾ ಅಧ್ಯಕ್ಷ ಗಿರೀಶ್ ಬೋರಕರ್ ಮಾತನಾಡಿ, ಈ ಬಗ್ಗೆ ಸ್ಥಳೀಯ ಹಾನಿಗೊಳಗಾದ ಮನೆಗಳ ನಿವಾಸಿಗಳನ್ನು ಸಾಂಕ್ವಾಳನಲ್ಲಿರುವ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಅಪಾಯಕಾರಿ ಮನೆಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ರಕ್ಷಣಾ ಗೋಡೆ ನಿರ್ಮಿಸುವ ಪ್ರಸ್ತಾವನೆ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ: Panaji: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next