Advertisement

ಕರಾವಳಿಯ ಕೆಲವೆಡೆ ಗುಡುಗು ಸಹಿತ ಉತ್ತಮ ಮಳೆ

10:00 AM Dec 30, 2019 | sudhir |

ಮಂಗಳೂರು: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಹೆಬ್ರಿಯಲ್ಲಿ ಸಂಜೆ, ಮೂಡುಬಿದಿರೆಯಲ್ಲಿ ರಾತ್ರಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

Advertisement

ಮಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಗುಡುಗು, ಮಿಂಚು ಇತ್ತು. ಬಂಟ್ವಾಳ, ಬಿ.ಸಿ.ರೋಡು ಸುತ್ತಮುತ್ತ ತುಂತುರು ಮಳೆಯಾಗಿದೆ. ರಾತ್ರಿ ಬೆಳ್ತಂಗಡಿ, ಮುಂಡಾಜೆ, ನಾರಾವಿ, ಕಲ್ಮಂಜ, ಧರ್ಮಸ್ಥಳ, ಗೇರುಕಟ್ಟೆ, ಉಜಿರೆ, ನಿಡಿಗಲ್‌, ಮಡಂತ್ಯಾರು. ಗುರುವಾಯನಕೆರೆ, ಬೆಳ್ತಂಗಡಿ, ಗುತ್ತಿಗಾರು, ಸುಳ್ಯ, ಪುತ್ತೂರು, ಬೆಳ್ಳಾರೆ ಪರಿಸರದಲ್ಲಿ ಮಳೆ ಸುರಿದಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿ, ಕಾಪು ಪರಿಸರದಲ್ಲಿ ರಾತ್ರಿ ಮಳೆ ಸುರಿದಿದ್ದು ಕುತ್ಯಾರಿನಲ್ಲಿ ನಡೆಯುತ್ತಿರುವ ಯಾಗ ಕಾರ್ಯಕ್ರಮಕ್ಕೆ ತೊಂದರೆಯಾಗಿದೆ.
ಸಿದ್ಧಾಪುರ, ಹಾಲಾಡಿ, ಅಮಾಸೆಬೈಲು, ಗೋಳಿಯಂ ಗಡಿ, ಮಡಾಮಕ್ಕಿ, ಆರ್ಡಿ ಭಾಗದಲ್ಲಿ ಸಂಜೆ ಮಳೆ ಸುರಿದಿದ್ದು ವಿದ್ಯುತ್‌ ಸ್ಥಗಿತಗೊಂಡಿದೆ.

ಹೆಬ್ರಿಯಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ವಿದ್ಯುತ್‌ ವ್ಯತ್ಯಯಗೊಂಡಿದೆ. ಹೆಬ್ರಿ ಸೋಮೇಶ್ವರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡ ಮಳೆಯಾಗಿದೆ.

ಮೂಡುಬಿದಿರೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಗುಡುಗು, ಮಿಂಚಿನೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದು ವರ್ಷಾಂತ್ಯದಲ್ಲಿ ವರ್ಷಧಾರೆಯಾದಂತಾಯಿತು. ಯಾವುದೇ ಹಾನಿ ಸಂಭವಿಸಿಲ್ಲ. 15 ನಿಮಿಷಗಳಲ್ಲೇ ಮಳೆ ನಿಂತ ಕಾರಣ ರಾತ್ರಿಯ ಸಮಾರಂಭಗಳಿಗೆ ಹೆಚ್ಚಿನ ಸಮಸ್ಯೆಯಾಗಲಿಲ್ಲ.

Advertisement

ಹವಾಮಾನ ಇಲಾಖೆಯ ವಾಡಿಕೆಯಂತೆ ಈ ಮಾಸಾಂತ್ಯಕ್ಕೆ ಮಳೆಗಾಲ ಕೊನೆಗೊಳ್ಳುತ್ತಿದ್ದು, ಚಳಿಗಾಲ ಇನ್ನೂ ಆರಂಭಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next