Advertisement

ಕರಾವಳಿಯಲ್ಲಿ ಭಾರೀ ಮಳೆ: ರೆಡ್‌ ಅಲರ್ಟ್‌ ಘೋಷಣೆ

07:54 PM Jul 12, 2021 | Team Udayavani |

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುರುಡೇಶ್ವರದಲ್ಲಿ ಇಬ್ಬರು ಪ್ರವಾಸಿಗರು ನೀರುಪಾಲಾಗಿದ್ದಾರೆ. ಕಾರವಾರದಲ್ಲಿಯೂ ಪ್ರವಾಸಿಗರು ಸುರಿವ ಮಳೆಯ ನಡುವೆಯೇ ಅಬ್ಬರದ ಅಲೆಗಳಲ್ಲಿ ಕಡಲಿಗೆ ಇಳಿದಿದ್ದರು. ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದರು.

Advertisement

ಇಷ್ಟಾದರೂ ಅಪಾಯಕಾರಿ ಅಲೆಗಳ ಅಬ್ಬರದ ನಡುವೆ ಹತ್ತಾರು ಯುವಕರು ಮೋಜು ಮಸ್ತಿಯಲ್ಲಿ ತೊಡಗಿಕೊಂಡದ್ದು ಕಾರವಾರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ರವಿವಾರ ಕಂಡುಬಂತು. ಲಾಕ್‌ಡೌನ್‌ ಇಲ್ಲದ ಕಾರಣ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಜಲಪಾತಗಳನ್ನು ನೋಡಲು ಬಂದವರು ಕಡಲತೀರಕ್ಕೂ ಬರುತ್ತಿದ್ದಾರೆ. ಕಡಲ ಅಲೆಗಳ ಅಬ್ಬರ ಲೆಕ್ಕಿಸದೇ ಯುವಕರು ನೀರಿಗೆ ಇಳಿಯುತ್ತಿದ್ದಾರೆ.

ಜಿಲ್ಲೆಯಲ್ಲಿ ಶನಿವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ಕಡಲತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಆಳೆತ್ತರಕ್ಕೆ ಅಲೆಗಳು ಚಿಮ್ಮುತ್ತಿವೆ. ರುದ್ರ ರಮಣೀಯ ನೋಟ ಇದಾದರೂ ಅಷ್ಟೇ ಅಪಾಯಕಾರಿ ಸನ್ನಿವೇಶ ಕಡಲ ತೀರದಲ್ಲಿದೆ. ಜಿಲ್ಲಾಡಳಿತ ಕೂಡ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದೆ. ಕಡಲತೀರದಲ್ಲಿ ಪೊಲೀಸ್‌ ಅಥವಾ ಯಾವುದೇ ಸಿಬ್ಬಂದಿ ಇಲ್ಲದಿರುವುದು ಪ್ರವಾಸಿಗರು ನೀರಿಗಿಳಿಯಲು ಕಾರಣವಾಗಿದೆ.

ಸ್ಥಳೀಯರಿಂದ ಎಚ್ಚರಿಕೆ: ಅಪಾಯಕಾರಿ ಅಲೆಗಳ ನಡುವೆ ನೀರಿಗಿಳಿದ ಯುವಕರಿಗೆ ಸ್ಥಳೀಯರು ತರಾಟೆ ತೆಗೆದುಕೊಂಡಿರು. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದರು. ವೀಕೆಂಡ್‌ ಹಿನ್ನೆಲೆಯಲ್ಲಿ ಪ್ರವಾಸಿಗರ ಕಡಲತೀರಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲಾಡಳಿತ ಕೂಡಲೇ ಸಂಜೆವರೆಗೂ ಕಡಲತೀರದ ಬಳಿ ಪೊಲೀಸ್‌ ಇಲ್ಲವೇ ಲೆ„ಫ್‌ ಗಾರ್ಡ್‌ ಸಿಬ್ಬಂದಿ ನೇಮಿಸುವಂತೆ ಸ್ಥಳೀಯರು ಜಿಲ್ಲಾಡಳಿತ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next