ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡು ವಾಹನ ಸವಾರರು ಮತ್ತು ವ್ಯಾಪಾರಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಬೆಳಗ್ಗೆಯಿಂದ ಸುರಿದ ಮಳೆಯಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ವಾಣಿಜ್ಯ ಕೇಂದ್ರ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ,ಗೌರಿಬಿದನೂರು ತಾಲೂಕು ಸಹಿತ 6 ತಾಲೂಕುಗಳಲ್ಲಿ ಸುರಿದ ಮಳೆಯಿಂದಜನಜೀವನ ಅಸ್ತವ್ಯಸ್ತಗೊಂಡಿತ್ತು. ದಸರಾ ಹಬ್ಬದ ಹೂ ಮತ್ತು ಹಣ್ಣು ಮಾರಾಟ ಮಾಡಿಕೊಂಡು ಜೀವನ ನಡೆಸುವ ಬೀದಿ ಬದಿಯ ವ್ಯಾಪಾರಿಗಳು ಮಳೆಯ ಆರ್ಭಟದಿಂದ ವ್ಯಾಪಾರ ಮಾಡಿಕೊಳ್ಳಲು ಸಾಧ್ಯವಿಲ್ಲ ದ್ದಾಗಿತ್ತು.ನಾಗರಿಕರುಮನೆಯಿಂದಹೊರ ಬರಲು ಸಾಹಸ ಮಾಡುವಂತಾಯಿತು.
ಜಲಾವೃತಗೊಂಡ ರೈಲ್ವೆ ಕೆಳಸೇತುವೆಗಳು: ಜಿಲ್ಲೆಯಲ್ಲಿ ಸುರಿದಮಳೆಯಿಂದಕೆಲವೊಂದು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದೆ.ಚಿಂತಾಮಣಿ ತಾಲೂಕಿನ ಅಟ್ಟಗಲ್‌ಸಮೀಪದ ಕೆರೆಯೊಂದು ಕೋಡಿ ಹರಿದಿದೆ. ಮಳೆಯ ಆರ್ಭಟದಿಂದಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಮಳೆ ನೀರು ಶೇಖರಣೆಗೊಂಡು ಹೆದ್ದಾರಿ ಮಿನಿ ದ್ವೀಪಗಳಾಗಿ ಪರಿವರ್ತನೆಗೊಂಡಿತ್ತು. ಶಿಡ್ಲಘಟ್ಟ ಮತ್ತು ಜಾತವಾರ ಹೊಸಹಳ್ಳಿಯಸಮೀಪ ಇರುವ ರೈಲ್ವೆ ಕೆಳಸೇತುವೆ ಜಲಾವೃತಗೊಂಡು ವಾಹನ ಸವಾರರುಮುಂದೆ ಸಾಗಲು ಪರದಾಡುವಂತಾಯಿತು.
ಸವಾರರು ಪರದಾಟ: ಜಾತವಾರ ಹೊಸಹಳ್ಳಿ ಬಳಿಯಿರುವ ರೈಲ್ವೆ ಕೆಳಸೇತುವೆ ಜಲಾವೃತಗೊಂಡಿದ್ದರಿಂದ ದ್ವಿಚಕ್ರ ವಾಹನಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಮುಂದೆ ಸಾಗಿದರು. ಇನ್ನೂ ಕೆಲ ಸವಾರರು ನೀರಿನಲ್ಲಿ ಮುಂದೆ ಹೋಗದೆವಾಹನ ಕೆಟ್ಟು ತಳ್ಳಿಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಸಹ ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ಬಹುತೇಕ ಕೆಳಸೇತುವೆಗಳು ಜಲಾವೃತ್ತಗೊಳ್ಳುತ್ತಿವೆ. ಈ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಸಂಸದರು, ಜನಪ್ರತಿನಿಧಿಗಳಿಗೆ ಲಿಖೀತದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆರೆಗಳ ಸಮೀಪ ಭದ್ರತೆ: ಎಸ್ಪಿ : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಕೆಲ ಕೆರೆಗಳಿಗೆ ನೀರು ಹರಿದು ಬಂದುಕೋಡಿ ಹರಿಯುತ್ತಿರುವುದರಿಂದ ಯುವಕರು ಈಜಾಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್‌ಅವರು ಮುನ್ನೆಚ್ಚರಿಕೆಕ್ರಮವಾಗಿ ಕೆರೆಗಳ ಸಮೀಪ ಪ್ರವೇಶ ನಿರ್ಬಂಧಿಸಿ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ನಾಗರಿಕರ ಮನವಿ ಪುರಸ್ಕರಿಸಿ ರೈಲ್ವೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿ ಕೆಳಸೇತುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲುಕ್ರಮ ಕೈಗೊಳ್ಳುವುದಾಗಿ ಎಸ್ಪಿ ಮಿಥುನ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.