ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ನಗರದ ಪೀರನವಾಡಿಯ ಸಿದ್ದೇಶ್ವರ ಗಲ್ಲಿಯ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ.
ಪೀರನವಾಡಿಯ ಸಿದ್ದೇಶ್ವರ ಗಲ್ಲಿಯ ಕ್ರಾಸ್ ನಂಬರ್ 1ರಲ್ಲಿಯ 15ಕ್ಕೂ ಹೆಚ್ಚು ಮನೆಗಳಿಗೆ ನರು ನುಗ್ಗಿದೆ. ಹೀಗಾಗಿ ಗುರುವಾರ ರಾತ್ರಿಯಿಂದಲೇ ಜನರು ಮನೆಯಿಂದ ನೀರು ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮಳೆ ನೀರಿನ ಅಬ್ಬರ ಮಾತ್ರ ತಗ್ಗಿಲ್ಲ.
ಈ ಭಾಗದ ಜನರು ಮಳೆ ನೀರಿನಿಂದ ಪರದಾಡುತ್ತಿದ್ದು, ಮನೆಯಲ್ಲಿ ಸುಮಾರು ೩ ಅಡಿಗೂ ಹೆಚ್ಚು ಎತ್ತರದಲ್ಲಿ ನೀರು ಬಂದಿದೆ. ಹೀಗಾಗಿ ಇಲ್ಲಿಯ ಜನರು ಬೇರೆಯವರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಪೀರನವಾಡಿ ಬಳಿ ಇರುವ ನಾಲಾ ತುಂಬಿ ಹರಿಯುತ್ತಿರುವುದಿಂದ ಈ ನೀರು ಮನೆಗಳಿಗೆ ನುಗ್ಗಿದೆ. ಮನೆಯಲ್ಲಿದ್ದ ಪೀಠೋಪಕರಣ, ರೆಫ್ರಿಜರೇಟರ್, ಕಪಾಟು, ಪಾತ್ರೆಗಳು, ಹಾಸಿಗೆ ಸೇರಿದಂತೆ ಮನೆ ವಸ್ತುಗಳೆಲ್ಲವೂ ನೀರಿನಲ್ಲಿ ಮುಳುಗಿವೆ. ಹೀಗಾಗಿ ಜನರು ಮಹಾನಗರ ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಸಿದ್ದೇಶ್ವರ ಗಲ್ಲಿಯಲ್ಲಿ ರಸ್ತೆ ಮತ್ತು ಗಟಾರು ನಿರ್ಮಿಸುವಂತೆ ಈ ಬಗ್ಗೆ ಅನೇಕ ಸಲ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.
ಉತ್ತರ ಮತ ಕ್ಷೇತ್ರದ ಶಿವಾಜಿ ನಗರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆಯನ್ನು0ಟು ಮಾಡಿದೆ. ಪ್ರತಿ ವರ್ಷ ಮಳೆಗಾಲ ಬಂತೆAದರೆ ಈ ಪ್ರದೇಶದ ಜನರ ನೋವು ಹೇಳತೀರದಾಗಿದೆ.