Advertisement

ಸಂಕೇಶ್ವರದಲ್ಲಿ ಪ್ರವಾಹ ಭೀತಿ: ರಾತ್ರೋರಾತ್ರಿ ರಕ್ಷಣಾ ಕಾರ್ಯ

01:46 PM Jul 23, 2021 | Team Udayavani |

ಸಂಕೇಶ್ವರ: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆ ಗಡಿ ಭಾಗದಲ್ಲಿ  ಸುರಿಯುತ್ತಿರುವ ಧಾರಕಾರ ಮಳೆಯಿಂದ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯಲ್ಲಿ ಪ್ರವಾಹ ಉಂಟಾಗಿರುವದರಿಂದ ಸಂಕೇಶ್ವರ ನಗರದಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಸ್ಥಳಾಂತರಿಸಲು ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಬ್ಬರದ ಮಳೆಯಿಂದಾಗಿ ಹಿರಣ್ಯಕೇಶಿ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ಸಂಕೇಶ್ವರ ನಗರದ ಮಠಗಲ್ಲಿಯಲ್ಲಿನ ಹಲವಾರು ಮನೆಗಳು ಜಲಾವೃತಗೊಂಡಿವೆ. ಪುರಸಭೆ ಮುಖ್ಯಾಧಿಕಾರಿ ಜಗಧೀಶ ಈಟಿ ಹಾಗೂ ಸಂಕೇಶ್ವರ ಪಿಎಸ್ ಐ ಗಣಪತಿ ಕೊಂಗನೊಳಿ ಅವರು ತಮ್ಮ ಸಿಬ್ಬಂದಿಗಲೊಂದಿಗೆ ಸಂಕಷ್ಟದಲ್ಲಿರುವ ಜನರನ್ನು ಮನೆಗಳಿಂದ ಬೇರೆಡೆಗೆ ಸ್ಥಳಾಂತ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಗುರುವಾರ ರಾತ್ರಿ 8 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಸುಮಾರು 4 ಅಡಿಗಳಷ್ಟು ನೀರು ಮಠಗಲ್ಲಿಯ ಮನೆಗಳಿಗೆ ನುಗ್ಗಿದೆ ಅಲ್ಲದೆ ಹಿರಣ್ಯಕೇಶಿ ನದಿಯ ದಡದಲ್ಲಿರುವ ಶ್ರೀ ಶಂಕರಲಿಂಗ ದೇವಸ್ಥಾನವು ಒಳಗಡೆ ನೀರು ತುಂಬಿಕೊಂಡು ಜಲಾವೃತಗೊಂಡಿದೆ.

ಅಲ್ಲದೇ ಮಹಾರಾಷ್ಟ್ರದಲ್ಲಿ ಮಳೆಯ ಅರ್ಭಟ ಮುಂದೆ ವರೆದಿದ್ದು, ನದಿಗೆ ನೀರು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನದಿ ನೀರು ನುಗ್ಗಿರುವ ಮಠಗಲ್ಲಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ಆರ್.ಬಿ.ಗಡಾದ ಹಾಗೂ ಪಿಎಸ್ ಐ ಗಣಪತಿ ಕೊಂಗನೋಳಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next