Advertisement
ಸಣ್ಣಪುಟ್ಟ ಪ್ರಕರಣಗಳಾದಲ್ಲಿ ಕಂದಾಯ ನಿರೀಕ್ಷರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ವರದಿ ಸಲ್ಲಿಸಿದ ಎರಡು ದಿನಗಳೊಳಗಾಗಿ ಪರಿಹಾರ ವಿತರಿಸಲಾಗುತ್ತಿದೆ. ಉಳಿದಂತೆ ಕಚ್ಚಾ ಮನೆ ತೀವ್ರ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಖುದ್ದು ಭೇಟಿ ಮಾಡಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತಿದೆ.
ಕಳೆದ ಮಳೆಗಾಲದಲ್ಲಿ ಸುಮಾರು 655 ಪ್ರಕರಣ ದಾಖಲಾಗಿದ್ದು, 74 ಲಕ್ಷ ರೂ. ವಿತರಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ತೋಟಗಾರಿಕೆ ಇಲಾಖೆಯು ತಾ|ನ ಅಡಿಕೆ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಿದಾಗ 12,168 ಬೆಳೆಗಾರರು ಅರ್ಜಿ ಸಲ್ಲಿಸಿದ್ದರು. ಈ ಪ್ರಕಾರ 189 ಪ್ರಕರಣಗಳಿಗೆ ಸಂಬಂಧಿಸಿ 5,68,753 ರೂ. ಪರಿಹಾರ ವಿತರಿಸಲಾಗಿತ್ತು. 119 ಪ್ರಕರಣ ವರದಿ
ಎಪ್ರಿಲ್‌ನಿಂದ ಜು.18ರ ವರೆಗೆ 119 ಪ್ರಕರಣಗಳು ವರದಿಯಾಗಿವೆ. ಅಡಿಕೆ ಕೃಷಿ ಹಾನಿ-30 ಪ್ರಕರಣಕ್ಕೆ 68,680 ರೂ. ಪರಿಹಾರ ವಿತರಿಸಲಾಗಿದೆ. ಕಚ್ಚಾಮನೆ ತೀವ್ರ ಹಾನಿ-2 ಪ್ರಕರಣಕ್ಕೆ 65,000 ರೂ., ಪಕ್ಕಾಮನೆ ತೀವ್ರ ಹಾನಿ-2 ಪ್ರಕರಣಕ್ಕೆ 91,500 ರೂ., ಕಚ್ಚಾಮನೆ ಭಾಗಶಃ ಹಾನಿ -26 ಪ್ರಕರಣಕ್ಕೆ 82,330 ರೂ., ಪಕ್ಕಾಮನೆ ಭಾಗಶಃ ಹಾನಿ-12 ಪ್ರಕರಣಕ್ಕೆ 59,975 ರೂ. ಪರಿಹಾರ ವಿತರಿಸಲಾಗಿದೆ.
Related Articles
Advertisement
ಅಧಿಕಾರಿಗಳಿಂದ ಮುತುವರ್ಜಿಗಾಳಿ-ಮಳೆಯಿಂದ ಗಂಭೀರ ಹಾನಿಗಳಾದಲ್ಲಿ ಸ್ಥಳದಲ್ಲೇ ಪರಿಹಾರ ವಿತರಿಸಲಾಗುತ್ತಿದೆ. ಈಗಾಗಲೇ ರೂ. 4 ಲಕ್ಷಕ್ಕೂ ಹೆಚ್ಚು ಮೊತ್ತದ ಪರಿಹಾರ ವಿತರಿಸಲಾಗಿದೆ. ವಿಎ, ಆರ್.ಐ.ಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ವರದಿ ನೀಡುವಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. 2 ದಿನಗಳೊಳಗಾಗಿ ಸಣ್ಣಪುಟ್ಟ ಪ್ರಕರಣಗಳಿಗೂ ಪರಿಹಾರ ವಿತರಿಸಲಾಗುತ್ತದೆ.
- ಗಣಪತಿ ಶಾಸ್ತ್ರಿ, ತಹಶೀಲ್ದಾರ್ - ಚೈತ್ರೇಶ್ ಇಳಂತಿಲ