Advertisement
ಶಿವಮೊಗ್ಗದಲ್ಲಿ ಈ ಅವಧಿಯಲ್ಲಿ ವಾಡಿಕೆಯಂತೆ 186 ಮಿ.ಮೀ ಮಳೆಯಾಗಬೇಕಾಗಿತ್ತು, ಆದರೆ 347 ಮಿ.ಮೀ ಮಳೆಯಾಗಿದೆ. ಹಾಸನದಲ್ಲಿ 191 ಮಿ.ಮೀ ವಾಡಿಕೆಯಾಗಿದ್ದು, 206 ಮಿ.ಮೀ ಮಳೆಯಾಗಿದೆ. ಚಿಕ್ಕಮಗಳೂರು ವಾಡಿಕೆ 137 ಮಿ.ಮೀ ಆಗಿದ್ದು, 318 ಮಿ.ಮೀ ಮಳೆಯಾಗಿದೆ. ಕೊಡಗಿನಲ್ಲಿ 187 ಮಿ.ಮೀ ವಾಡಿಕೆಯಾಗಿದ್ದರೆ, ಇದರ ಮೂರು ಪಟ್ಟು ಅಂದರೆ 580 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಯಂತೆ 276 ಮಿ.ಮೀ ಮಳೆಯಾಗಬೇಕಾಗಿತ್ತು, ಆದರೆ 462 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಉಡುಪಿಯಲ್ಲಿ ವಾಡಿಕೆಯಂತೆ 325 ಮಿ.ಮೀ ಆಗಿದ್ದು, 519 ಮಿ.ಮೀ ಮಳೆಯಾಗಿದೆ. ಇನ್ನು ಉತ್ತರ ಕನ್ನಡದಲ್ಲಿ ವಾಡಿಕೆಯಂತೆ 232 ಮಿ.ಮೀ ಮಳೆಯಾಗಬೇಕಾಗಿದ್ದು, 482 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಜುನ್ ಮತ್ತು ಜುಲೈ ತಿಂಗಳಲ್ಲಿ ಮಲೆನಾಡು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಇದೀಗ ಈ ಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Advertisement
ಕರಾವಳಿ, ಮಲೆನಾಡಿಲ್ಲಿ ವಾಡಿಕೆಗಿಂತ ಅಧಿಕ ಮಳೆ! ಕೊಡಗು: 580 ಮಿ.ಮೀ, ಉಡುಪಿ : 519 ಮಿ.ಮೀ
08:32 PM Aug 08, 2020 | sudhir |
Advertisement
Udayavani is now on Telegram. Click here to join our channel and stay updated with the latest news.