Advertisement

Heavy Rain: ಶಬರಿಮಲೆಯಲ್ಲಿ ಭಾರೀ ಮಳೆ

10:15 PM Dec 01, 2024 | Team Udayavani |

ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯ ಕಾರಣದಿಂದ ಶಬರಿಮಲೆಯಲ್ಲಿ ತೀರ್ಥಾಟಕರ ಸಂಖ್ಯೆ ಕಡಿಮೆಯಾಗಿದೆ.

Advertisement

ಗಂಟೆಗೆ 20ರಿಂದ 25 ಸಾವಿರದಷ್ಟು ಭಕ್ತರು ಶಬರಿಮಲೆಗೆ ತಲುಪುತ್ತಿದ್ದಾರೆ. ಮಳೆಯಿಂದಾಗಿ ಪಂಪಾದಿಂದ ಸನ್ನಿಧಾನಕ್ಕೆ ತೀರ್ಥಾಟಕರಿಗೆ ತಲುಪಲು ಸಮಸ್ಯೆಯಾಗಿದೆ.

ಶಬರಿಮಲೆಯಲ್ಲಿ ಬಿಟ್ಟು ಬಿಟ್ಟು ಭಾರೀ ಮಳೆಯಾಗುತ್ತಿದ್ದು, ಸನ್ನಿಧಾನದಲ್ಲಿ ಮುಂಜಾನೆ 3 ಗಂಟೆಗೆ ಬಾಗಿಲು ತೆರೆದಾಗ ಭಾರೀ ಸಂಖ್ಯೆಯಲ್ಲಿ ಭಕ್ತರಿದ್ದರು. ಮುಂಜಾನೆ 5 ಗಂಟೆಗೆ ಸರದಿಯಲ್ಲಿ ನಿಂತ ಭಕ್ತರು ಅಯ್ಯಪ್ಪ ದರ್ಶನ ನಡೆಸಿದರು. ಪಂಪಾದಿಂದ ಸನ್ನಿಧಾನಕ್ಕೆ ನೀಲಮಲ, ಅಪ್ಪಾಚ್ಚಿಮೇಡ್‌ ಮೂಲಕ ತೀರ್ಥಾಟಕರನ್ನು ಹಾದು ಹೋಗಲು ಅವಕಾಶ ಮಾಡಿಕೊಡಲಾಗಿದೆ.

ನೀಲಮಲದಿಂದ ಅಲ್ಲಲ್ಲಿ ಚಪ್ಪರಗಳಿರುವುದರಿಂದ ಮಳೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಿದೆ. ಮರಕೂಟ್ಟಂನಿಂದ ಶರಂಕುತ್ತಿ ದಾರಿಯಲ್ಲಿ ಸರದಿ ಕಾಂಪ್ಲೆಕ್ಸ್‌ಗಳಿದ್ದು ಇಲ್ಲಿ ಅಯ್ಯಪ್ಪ ಭಕ್ತರು ಮಳೆಯಿಂದ ಆಶ್ರಯ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next