Advertisement
ಬಿಹಾರದಲ್ಲಿ ಈಗಾಗಲೇ ವರುಣನ ಅಬ್ಬರವು 250 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಸುಮಾರು ಒಂದೂವರೆ ಕೋಟಿಗೂ ಅಧಿಕ ಮಂದಿಯನ್ನು ನಿರ್ವಸಿತರನ್ನಾಗಿಸಿದೆ. ಇನ್ನು ಉತ್ತರಪ್ರದೇಶದಲ್ಲಿ ರವಿವಾರ ಮತ್ತೆ ಪ್ರವಾಹ ಅತಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಮೃತಪಟ್ಟವರ ಸಂಖ್ಯೆ 69ಕ್ಕೇರಿದೆ. ಇಲ್ಲಿನ 24 ಜಿಲ್ಲೆಗಳ 20 ಲಕ್ಷ ಮಂದಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೇಪಾಳದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಉತ್ತರಪ್ರದೇಶದ ನದಿಗಳೆಲ್ಲ ಉಕ್ಕಿ ಹರಿಯುತ್ತಿದ್ದು, 2,523 ಗ್ರಾಮಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಅಸ್ಸಾಂನಲ್ಲಿ ಭಾನುವಾರ ಮಳೆ ಸಂಬಂಧಿ ಘಟನೆಗಳಿಂದ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಇಲ್ಲಿ ಪ್ರವಾಹ ಸ್ಥಿತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ, 15 ಜಿಲ್ಲೆಗಳ 19 ಲಕ್ಷ ಮಂದಿ ಇನ್ನೂ ಸಂಕಷ್ಟದಲ್ಲಿದ್ದಾರೆ. ಇಲ್ಲಿ ಈವರೆಗೆ 67 ಮಂದಿ ಸಾವಿಗೀಡಾಗಿದ್ದಾರೆ.
Advertisement
ಭಾರೀ ಮಳೆ, ಪ್ರವಾಹಕ್ಕೆ ಉತ್ತರ ತತ್ತರ
08:45 AM Aug 21, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.