Advertisement

ಮಳೆಯಬ್ಬರಕ್ಕೆ ಮನೆ-ಬೆಳೆ ಹಾನಿ

04:26 PM May 17, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗಳ ಅಬ್ಬರ ಜೋರಾಗಿದೆ. ಮಳೆ ಹಲವು ರೈತರಲ್ಲಿ ಸಂತಸ ಮೂಡಿಸುತ್ತಿದ್ದರೂ ಕೆಲವೆಡೆ ಬಿರುಗಾಳಿ ಹಾಗೂ ಭಾರಿ ಮಳೆಗೆ ಬೆಳೆ ಹಾನಿಗೀಡಾಗುತ್ತಿದೆ. ಮನೆಗಳ ತಗಡು ಹಾರಿ ಹೋಗಿವೆ.

Advertisement

ತಾಲೂಕಿನ ಕುಣಕೇರಿ ತಾಂಡಾದಲ್ಲಿ ಶನಿವಾರ ಸಂಜೆ ಬೀಸಿದ ಬಿರುಗಾಳಿ ಹಾಗೂ ರಭಸದ ಮಳೆಗೆ ಗಣೇಶ ಬಂಡಿ, ದೀಪ ಬಾಯಿ, ಬದ್ರಿ ಬಾಯಿ, ಶಿವಪ್ಪ ರಣಸೋತ್‌ ಸೇರಿ 8ಕ್ಕೂ ಹೆಚ್ಚು ಜನರ ಮನೆಗಳ ತಗಡು ಗಾಳಿಗೆ ಹಾರಿ ಹೋಗಿವೆ. ಇದರಿಂದ ಈ ಕುಟುಂಬಗಳು ಮಳೆಯಲ್ಲೇ ನೆನೆಯುವಂತಾಗಿವೆ. ಮನೆಯಲ್ಲಿರುವ ಸಾಮಗ್ರಿಗಳು ನೀರಿನಲ್ಲಿ ನೆನೆದು ಯಾತಕ್ಕೂ ಬಾರದಂತಾಗಿವೆ. ಗ್ರಾಮಕ್ಕೆ ಅಧಿಕಾರಿಗಳು, ಜನಪ್ರತಿನಿಧಿ  ಗಳು ಕೂಡಲೇ ಭೇಟಿ ನೀಡಿ ಸಂತ್ರಸ್ಥರ ಮನೆಗಳ ಹಾನಿಯ ಕುರಿತು ಸರ್ವೇ ನಡೆಸಿ ಪರಿಹಾರ ನೀಡಬೇಕು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ದುಡಿಮೆಯೂ ಇಲ್ಲ. ನಾವು ನಿತ್ಯದ ಜೀವನಕ್ಕೂ ಪರದಾಡುವಂತ ಸ್ಥಿತಿಯಲ್ಲಿದ್ದೇವೆ. ಸರ್ಕಾರ ಹಾಗೂ ಅಧಿಕಾರಿಗಳು ನಮ್ಮ ನೋವು ಆಲಿಸಲಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಇನ್ನೂ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಶ್ರೀನಿವಾಸ ಇಮ್ಮಡಿ ಅವರ ಬಾಳೆ ಬೆಳೆ ಗಾಳಿ, ಮಳೆಗೆ ನೆಲಕಚ್ಚಿದೆ. ನೀರಿನ ಕೊರತೆ ಮಧ್ಯೆಯೂ ಕಷ್ಟಪಟ್ಟು ಬೆಳೆದ್ದ ಬೆಳೆ ನೆಲಕ್ಕೆ ಉರುಳಿರುವುದು ರೈತರನ್ನು ಕಂಗಾಲಾಗಿಸಿದೆ. ತಾಲೂಕಿನ ಮೆಳ್ಳಿಕೇರಿಯ ರೈತ ಈಶಪ್ಪ ಅವರ ಏಲಕ್ಕಿ ಬಾಳೆ, ಯಂಕಪ್ಪ ಡಂಬ್ರಳ್ಳಿ, ಸವಿತಾ ಮೆಳ್ಳಿಕೇರಿ ಸೇರಿದಂತೆ ಸುಶಿಲವ್ವ ಅವರಬಾಳೆಯೂ ಧರೆಗುರುಳಿದ್ದು, ರೈತರ ನೋವಿಗೆ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ, ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next