Advertisement

ಸಿಂದಗಿ ; ಬೆಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

07:37 PM Nov 27, 2021 | Team Udayavani |

ಸಿಂದಗಿ: ತಾಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ಹೂವು-ಕಾಯಿ ಹಂತದಲ್ಲಿರುವ ದ್ರಾಕ್ಷಿ ಬೆಳೆಗೆ ಹಾನಿಯಾಗಿರುವುದನ್ನು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಶನಿವಾರ ವೀಕ್ಷಣೆ ಮಾಡಲಾಯಿತು.

Advertisement

ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತಿರಣ ನಿರ್ದೇಶಕ ಡಾ.ಕುಲಪತಿ ಹಿಪ್ಪರಗಿ, ತಳಿ ವಿಜ್ಞಾನಿ ಡಾ.ಡಿ.ಎ. ಪೀರಜಾದೆ, ತೋಟಗಾರಿಕೆ ಮಹಾವಿದ್ಯಾಲಯ ಬೆಳೆ ಶರೀರಕ್ರೀಯಾ ಶಾಸ್ತ್ರ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಅವಟಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ಅವರ ತಂಡ ವೀಕ್ಷಿಸಿದರು. ದ್ರಾಕ್ಷಿ ಬೆಳೆ ಹಾನಿಯಾಗಿರುವುದು ಪರಿಶೀಲಿಸುವುದರ ಜತೆಗೆ ಸಮೀಕ್ಷೆ ಕಾರ್ಯ ಕೈಗೊಂಡು ರೈತರಿಗೆ ಧೈರ್ಯ ತುಂಬಲು ತಂಡದ ಅಧಿಕಾರಿಗಳು ಮುಂದಾದರು.

ಕಳೆದೊಂದು ವಾರ ನಿರಂತರ ಸುರಿದ ಮಳೆಯಿಂದಾಗಿ ದ್ರಾಕ್ಷಿ ಹೂವು, ಕಾಯಿ ಕೊಳೆಯುತ್ತಿವೆ. ಸತತವಾಗಿ ಸುರಿದ ಮಳೆಗೆ ಈಗಾಗಲೇ ಶೇ.100ರಷ್ಟು ದ್ರಾಕ್ಷಿ ಬೆಳೆ ಸಂಪೂರ್ಣ ನಷ್ಟವಾಗಿದೆ ಎಂದು ತಾಲೂಕಿನ ಓತಿಹಾಳ, ಬಂದಾಳ ಗ್ರಾಮದ ದ್ರಾಕ್ಷಿ ಬೆಳೆದ ರೈತರು ತಮ್ಮ ಅಳಲನ್ನು ತಂಡದ ಮುಂದೆ ತೊಡಿಕೊಂಡರು.

ಸಿಂದಗಿ ಮತ್ತು ಆಲಮೇಲ ತಾಲೂಕಿನ ಸುಮಾರು 792 ಹೆಚ್ಚು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದು ಅದರಲ್ಲಿ ಮಳೆಯಿಂದ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ. ದ್ರಾಕ್ಷಿ ಈಗ ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದ್ದು, ನಿರಂತರ ಮಳೆಯಿಂದ ದ್ರಾಕ್ಷಿ ಹೂವು ಮತ್ತು ಕಾಯಿ ಕೊಳೆತು ಹೋಗಿದೆ ಎಂದು ಸಿಂದಗಿ, ಆಲಮೇಲ, ರಾಂಪೂರ ಪಿ.ಎ., ಕನ್ನೊಳ್ಳಿ ಗ್ರಾಮದ ದ್ರಾಕ್ಷಿ ಬೆಳೆಗಾರರು ತಂಡವನ್ನು ತಮ್ಮ ತೋಟಗಳಿಗೆ ಕರೆದುಕೊಂಡು ಹೋಗಿ ದ್ರಾಕ್ಷಿ ಬೆಳೆ ಹಾನಿಯನ್ನು ತೋರಿಸಿದರು. ದ್ರಾಕ್ಷಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಇಲಾಖೆ ಮೊರೆ ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆಹೋಗುವಂತಾಗಿದೆ ಎಂದು ಅಳಲು ತೊಡಿಕೊಂಡರು.

ಇದನ್ನೂ ಓದಿ :

Advertisement

ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತಿರಣ ನಿರ್ದೇಶಕ ಡಾ.ಕುಲಪತಿ ಹಿಪ್ಪರಗಿ ಮಾತನಾಡಿ, ಸರಕಾರದ ಆದೇಶದ ಮೇರೆಗೆ ಸಿಂದಗಿ ತಾಲೂಕಿನಲ್ಲಿ ಹಾನಿಗೊಳಗಾದ ದ್ರಾಕ್ಷಿ ಬೆಳೆ ವೀಕ್ಷಣೆಗಾಗಿ ತಂಡ ರಚಿಸಲಾಗಿದೆ. ತಾಲೂಕಿನಲ್ಲಿ ಸಾಕಷ್ಟು ದ್ರಾಕ್ಷಿ ತಾಕುಗಳನ್ನು ವಿಕ್ಷಣೆ ಮಾಡಲಾಗಿದೆ. ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಗೊಳಗಾಗಿದೆ. ವೈಜ್ಞಾನಿಕವಾಗಿ ದ್ರಾಕ್ಷಿ ಚಾಟ್ನಿ ಮಾಡಿ ಕಾಯಿ ಕಟ್ಟುವ ಸಮದರ್ಭದಲ್ಲಿ ತೇವಾಂಶ ಜಾಸ್ತಿಯಿರವಬಬಾರದು. ಮನೆನ ಅಕಾಲಿಕ ಮಳೆ, ತೇವಾಂಶ ಜಾಸ್ತಿಯಾಗಿ ಗಂಡು ಹೂವಿನ ಸಂಖ್ಯೆ ಕಡಿಮೆಯಾಗಿ ಸರಿಯಾಗಿ ಪರಾಗಸ್ಪರ್ಷವಾಗಿರುವುದಿಲ್ಲ. ಹೀಗಾಗಿ ಹೂವುಗಳು ಕಾಯಿ ಕಟ್ಟುವ ಬದಲಾಗಿ ಉದಿರಿಹೋಗಿವೆ. ಇದರಿಂದ ದ್ರಾಕ್ಷಿ ಬೆಳೆ ದ ರೈತ ಕಂಗಾಲಾಗಿದ್ದಾನೆ. ಬೆಳೆ ಸಮೀಕ್ಷೆ ಮಾಡುವ ಜೊತೆಗೆ ಉಳಿದ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಂಡು ಹೋಗುವ ಸಲಹೆಯನ್ನು ನೀಡಲಾಗುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಲಾಗುತ್ತಿದೆ. ದ್ರಾಕ್ಷಿ ಬೆಳೆಹಾನಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ಮಾತನಾಡಿ, ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿ 792 ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಮಳೆಗೆ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ವೈಜ್ಞಾನಿಕವಾಗಿ ಸರ್ವೆ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ಬೆಳೆ ಪರಿಹಾರಧನ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಚಿದಾನಂದ ಬೂದಿಹಾಳ ಹಾಗೂ ರೈತರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next