Advertisement
ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತಿರಣ ನಿರ್ದೇಶಕ ಡಾ.ಕುಲಪತಿ ಹಿಪ್ಪರಗಿ, ತಳಿ ವಿಜ್ಞಾನಿ ಡಾ.ಡಿ.ಎ. ಪೀರಜಾದೆ, ತೋಟಗಾರಿಕೆ ಮಹಾವಿದ್ಯಾಲಯ ಬೆಳೆ ಶರೀರಕ್ರೀಯಾ ಶಾಸ್ತ್ರ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಅವಟಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ಅವರ ತಂಡ ವೀಕ್ಷಿಸಿದರು. ದ್ರಾಕ್ಷಿ ಬೆಳೆ ಹಾನಿಯಾಗಿರುವುದು ಪರಿಶೀಲಿಸುವುದರ ಜತೆಗೆ ಸಮೀಕ್ಷೆ ಕಾರ್ಯ ಕೈಗೊಂಡು ರೈತರಿಗೆ ಧೈರ್ಯ ತುಂಬಲು ತಂಡದ ಅಧಿಕಾರಿಗಳು ಮುಂದಾದರು.
Related Articles
Advertisement
ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ಮತ್ತು ವಿಸ್ತಿರಣ ನಿರ್ದೇಶಕ ಡಾ.ಕುಲಪತಿ ಹಿಪ್ಪರಗಿ ಮಾತನಾಡಿ, ಸರಕಾರದ ಆದೇಶದ ಮೇರೆಗೆ ಸಿಂದಗಿ ತಾಲೂಕಿನಲ್ಲಿ ಹಾನಿಗೊಳಗಾದ ದ್ರಾಕ್ಷಿ ಬೆಳೆ ವೀಕ್ಷಣೆಗಾಗಿ ತಂಡ ರಚಿಸಲಾಗಿದೆ. ತಾಲೂಕಿನಲ್ಲಿ ಸಾಕಷ್ಟು ದ್ರಾಕ್ಷಿ ತಾಕುಗಳನ್ನು ವಿಕ್ಷಣೆ ಮಾಡಲಾಗಿದೆ. ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಗೊಳಗಾಗಿದೆ. ವೈಜ್ಞಾನಿಕವಾಗಿ ದ್ರಾಕ್ಷಿ ಚಾಟ್ನಿ ಮಾಡಿ ಕಾಯಿ ಕಟ್ಟುವ ಸಮದರ್ಭದಲ್ಲಿ ತೇವಾಂಶ ಜಾಸ್ತಿಯಿರವಬಬಾರದು. ಮನೆನ ಅಕಾಲಿಕ ಮಳೆ, ತೇವಾಂಶ ಜಾಸ್ತಿಯಾಗಿ ಗಂಡು ಹೂವಿನ ಸಂಖ್ಯೆ ಕಡಿಮೆಯಾಗಿ ಸರಿಯಾಗಿ ಪರಾಗಸ್ಪರ್ಷವಾಗಿರುವುದಿಲ್ಲ. ಹೀಗಾಗಿ ಹೂವುಗಳು ಕಾಯಿ ಕಟ್ಟುವ ಬದಲಾಗಿ ಉದಿರಿಹೋಗಿವೆ. ಇದರಿಂದ ದ್ರಾಕ್ಷಿ ಬೆಳೆ ದ ರೈತ ಕಂಗಾಲಾಗಿದ್ದಾನೆ. ಬೆಳೆ ಸಮೀಕ್ಷೆ ಮಾಡುವ ಜೊತೆಗೆ ಉಳಿದ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಂಡು ಹೋಗುವ ಸಲಹೆಯನ್ನು ನೀಡಲಾಗುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಲಾಗುತ್ತಿದೆ. ದ್ರಾಕ್ಷಿ ಬೆಳೆಹಾನಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಘವೇಂದ್ರ ಬಗಲಿ ಮಾತನಾಡಿ, ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿ 792 ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಮಳೆಗೆ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ವೈಜ್ಞಾನಿಕವಾಗಿ ಸರ್ವೆ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ಬೆಳೆ ಪರಿಹಾರಧನ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆ ಅಧಿಕಾರಿ ಚಿದಾನಂದ ಬೂದಿಹಾಳ ಹಾಗೂ ರೈತರು ಇದ್ದರು.