Advertisement

Heavy Rain: ತಮಿಳುನಾಡಿನಲ್ಲಿ ಮುಂದುವರೆದ ಮಳೆ… ರೈಲು ಸಂಚಾರ ಸ್ಥಗಿತ, ಶಾಲೆಗಳಿಗೆ ರಜೆ

10:29 AM Nov 10, 2023 | Team Udayavani |

ತಮಿಳುನಾಡು: ಈಶಾನ್ಯ ಮಾನ್ಸೂನ್ ತೀವ್ರಗೊಂಡಿದ್ದರಿಂದ ತಮಿಳುನಾಡಿನ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು. ಪರಿಣಾಮ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ ವರದಿಯಾಗಿದೆ.

Advertisement

ರಾಜ್ಯದ ಕನಿಷ್ಠ 12 ಜಿಲ್ಲೆಗಳಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಾದ ತಿರುವರೂರ್ ಹಾಗೂ ಪುದುಚೇರಿಯ ಕಾರೈಕ್ಕಲ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ನಡುವೆ ತಂಜಾವೂರು, ತಿರುವಾರೂರ್, ನಾಗಪಟ್ಟಣಂ, ಮೈಲಾಡುತುರೈ, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ವಿರುಧುನಗರ, ತೂತುಕುಡಿ, ತೆಂಕಾಸಿ, ತಿರುನಲ್ವೇಲಿ ಮತ್ತು ಕನ್ನಿಯಾಕುಮಾರಿ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಚೆನ್ನೈನ ಐಎಂಡಿ ಮುನ್ಸೂಚನೆ ನೀಡಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ನೀಲಗಿರಿ ಮೌಂಟೇನ್ ರೈಲ್ವೆಯ ಕಲ್ಲಾರ್ ಮತ್ತು ಕುನ್ನೂರ್ ವಿಭಾಗದ ನಡುವಿನ ಹಳಿಯಲ್ಲಿ ಭೂಕುಸಿತ ಮತ್ತು ಮರಗಳು ಬಿದ್ದ ಕಾರಣ, ನವೆಂಬರ್ 16 ರವರೆಗೆ ಎರಡು ರೈಲುಗಳ ಸೇವೆಗಳನ್ನು ರದ್ದುಗೊಳಿಸಿದೆ.

Advertisement

ಮೆಟ್ಟುಪಾಳ್ಯಂನಿಂದ ಉದಗಮಂಡಲಕ್ಕೆ ಸಂಚರಿಸುವ 06136 ಮತ್ತು 06137 ಪ್ಯಾಸೆಂಜರ್ ವಿಶೇಷ ರೈಲುಗಳ ಸಂಚಾರವನ್ನು ನ. 10 ರಿಂದ ನ. 16 ರವರೆಗೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆಯಿಂದ ಮಧುರೈ, ಕೊಯಮತ್ತೂರು ಮತ್ತು ತೂತುಕುಡಿ ಸೇರಿದಂತೆ ಹಲವು ನಗರಗಳಲ್ಲಿ ಗುರುವಾರ ತೀವ್ರ ಜಲಾವೃತವಾಗಿತ್ತು. ಕೊಯಮತ್ತೂರಿನ ಕುಂಜಪ್ಪ-ಪನೈ ಬಳಿಯ ರಸ್ತೆ ಮತ್ತು ಕೋಟಗಿರಿ ಮೆಟ್ಟುಪಾಳ್ಯಂ ಪ್ರದೇಶದ ಮೆಟ್ಟುಪಾಳ್ಯಂ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ.

ಇದನ್ನೂ ಓದಿ: KEA Exam Scam: ಆರ್.ಡಿ. ಪಾಟೀಲ್ ಗೆ ರಕ್ಷಣೆ ನೀಡಿದ ಆರೋಪದ ಮೇಲೆ ಇನ್ನಿಬ್ಬರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next