ರಾಯಚೂರು: ಒಂದು ವಾರದಿಂದ ಸತತ ಜಿಟಿ ಜಿಟಿ ಮಳೆ ಸುರಿದು ಎರಡು ದಿನ ವಿರಾಮ ನೀಡಿದ್ದ ವರುಣ ಶುಕ್ರವಾರ ರಾತ್ರಿಯಿಂದ ಮತ್ತೆ ಆರ್ಭಟಿಸಿದ್ದು ರಾಯಚೂರು ಜಿಲ್ಲೆ ತತ್ತರಿಸಿದೆ.
ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ. ತಾಲೂಕಿನ ಜೇಗರಕಲ್ ಕುಕುನೂರು ಗುರ್ಜಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಳ್ಳಗಳು ತುಂಬಿ ಹರಿದ ಪರಿಣಾಮ ಸಂಚಾರ ಕಡಿತಗೊಂಡಿದೆ.
ಇದನ್ನೂ ಓದಿ: ತಂಗಿಯ ಒಂದು ಪ್ರಶ್ನೆಯಿಂದ ಕೃಷಿ ಮಹತ್ವ ಅರಿತು ಮನೆಯಂಗಳದಲ್ಲೇ ಭತ್ತ ಬೆಳೆದ ಅವಳಿ ಸಹೋದರರು
ಸಮೀಪದ ಯರಮರಸ್ ಬಳಿ ಹೈದರಾಬಾದ್ ಹೆದ್ದಾರಿ ಪಕ್ಕದಲ್ಲೆ ಹಳ್ಳ ಹರಿದಿದೆ. ಇನ್ನೂ ಈಗಾಗಲೇ ಅನೇಕ ಮನೆಗಳು ಕುಸಿದಿದ್ದು ಈ ಮಳೆಯಿಂದ ಮತ್ತಷ್ಟು ಹಾನಿ ಸಂಭವಿಸಿದೆ. ಹತ್ತಿ ತೊಗರಿ ಬೆಳೆಗೆ ಮಳೆ ಕಂಟಕವಾಗಿ ಪರಿಣಮಿಸಿದೆ.
ಗ್ರಾಮೀಣ ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ಕಡಿತಗೊಂಡಿದ್ದು ಈವರೆಗೆ ಬಂದಿಲ್ಲ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನ ಜಾಗರಣೆ ಮಾಡುವಂತಾಗಿದೆ.