ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ, ಕಟ್ಟಡಗಳು ತುಂಬಿದ್ದು, ಹಳ್ಳಕೊಳ್ಳಗಳು ಜೀವ ತುಂಬಿ ಹರಿಯುತ್ತಿವೆ.
ಹೊಸದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ದೇವಪುರದ ಕಾಲನಿಯಲ್ಲಿ ಕೆಲ ಮನೆಗಳ ಜಲಾವೃತವಾಗಿವೆ.
ಹೊಸದುರ್ಗ ಹಾಗೂ ಹೊಳಲ್ಕೆರೆ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ವೇದಾವತಿ ನದಿ ಕೂಡಾ ಜೀವ ತುಂಬಿಕೊಂಡಿದೆ. ವಾಣಿ ವಿಲಾಸ ಸಾಗರಕ್ಕೆ ಸಾಕಷ್ಟು ನೀರು ಹರಿಯುತ್ತಿದೆ.
ಹೊಳಲ್ಕೆರೆ ತಾಲೂಕಿನ ಚನ್ನಸಮುದ್ರದ ಗಂಗಮ್ಮನಕೆರೆ ಹೊಡೆದು ನೀರು ಹಳ್ಳದ ಮೂಲಕ ಗಂಗಸಮುದ್ರ ಗ್ರಾಮದ ಕೆರೆ ಸೇರುತ್ತಿರುತ್ತಿದೆ.
ಹೊಳಲ್ಕೆರೆ ತಾಲೂಕಿನ ನಾಯಕರಕಟ್ಟೆ ಗ್ರಾಮದಲ್ಲಿ 30 ಗುಡಿಸಲು ಜಲಾವೃತವಾಗಿವೆ. ಸುಡುಗಾಡು ಸಿದ್ಧರಿಗೆ ಸೇರಿದ ಗುಡಿಸಲುಗಳು ಜಲಾವೃತವಾಗೊಂಡಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯಿಂದ ಹಾನಿಯಾದ ಬೆನಕನಹಳ್ಳಿ ಮತ್ತಿತರೆ ಗ್ರಾಮಗಳಿಗೆ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.