Advertisement
ತೆಲಂಗಾಣದಲ್ಲಿ ಮಳೆಯ ಹಾನಿ ಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತರೊಬ್ಬರು ಪ್ರವಾಹದಲ್ಲಿ ಕೊಚ್ಚಿ ಕೊಂಡು ಹೋಗಿದ್ದಾರೆ. ಹರಿಯಾಣದಲ್ಲಿ ಎರಡು ಸಾವು ಸಂಭವಿಸಿವೆ. ಶುಕ್ರವಾರದ ಮಳೆಯ ರಾದ್ಧಾಂತದಲ್ಲಿ ಮಹಾ ರಾಷ್ಟ್ರದಲ್ಲಿ ನಾಲ್ಕು ಜನರು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 99ಕ್ಕೇರಿದೆ.
Related Articles
Advertisement
ಹರಿಯಾಣದಲ್ಲಿ 2 ಸಾವು: ಬಿರುಗಾಳಿ ಸಹಿತ ಮಳೆಗೆ ಅಂಗಡಿ ಮುಂಗಟ್ಟುಗಳು ಕುಸಿದ ಪರಿಣಾಮವಾಗಿ ಇಬ್ಬರು ಸಾವಿಗೀಡಾಗಿರುವ ಘಟನೆ ಹರಿ ಯಾಣದ ಸೋನಿಪತ್‌ನ ಗೊಹಾನಾ ಪ್ರಾಂತದಲ್ಲಿ ನಡೆದಿದೆ. ಮೃತ ಪಟ್ಟವರಿಬ್ಬರೂ ತರಕಾರಿ ವರ್ತಕರೆಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿ 2 ಸಾವು: ಉತ್ತರ ಪ್ರದೇಶದ ಮವೂ ಜಿಲ್ಲೆಯಲ್ಲಿ ನವಾಲ್ಪುರ ಎಂಬ ಹಳ್ಳಿಯಲ್ಲಿ ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದ ಉಷಾ ಚೌಹಾನ್ (35) ಮತ್ತು ದೇವ್ ಲಾಲಿ (34) ಎಂಬುವವರು ಸ್ಥಳದವಲ್ಲಿಯೇ ಮೃತಪಟ್ಟಿದ್ದಾರೆ. ಇವರ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕೌಸಲ್ಯಾ ಎಂಬ ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಾರಾಷ್ಟ್ರದಲ್ಲಿ 4 ಸಾವು: ಮಹಾರಾಷ್ಟ್ರದಲ್ಲಿ ಶುಕ್ರವಾರದಂದು ಮಳೆಗೆ ಸಂಬಂಧಿಸಿದ ಪ್ರತ್ಯೇಕದುರ್ಘ ಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಜೂ. 1ರಿಂದ ಇಲ್ಲಿಯ ವರೆಗೆ ಮಳೆಯಿಂದಾಗಿ ಮರಣ ಹೊಂದಿದವರ ಸಂಖ್ಯೆ 99ಕ್ಕೇರಿದೆ. ಗಾಡಿcರೋಲಿ, ಭಂಡಾರಾ, ಪಾಲ್ಗಾರ್, ಚಂದ್ರಾಪುರ, ಗೊಂಡಿಯಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿ ತಗ್ಗು ಪ್ರದೇಶ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ. ದಕ್ಷಿಣದಲ್ಲಿ ನಿಲ್ಲದ ವರುಣನ ಅಬ್ಬರ
ದಕ್ಷಿಣ ಭಾರತದಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ತೆಲಂಗಾಣದಲ್ಲಿ ನೆರೆ ಸ್ಥಳಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡಗಳಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುವಂತೆ ಅಧಿಕಾರಿಗಳು ಮುಖ್ಯಂತ್ರಿ ಕೆ.ಚಂದ್ರಶೇಖರ್ ರಾವ್ ಆದೇಶಿಸಿದ್ದಾರೆ. ಅಗತ್ಯವಿರುವಲ್ಲಿ ಹೆಲಿಕಾಪ್ಟರ್‌ನೂ° ಬಳಸಿ ಜನರನ್ನು ರಕ್ಷಿಸಲು ಸೂಚಿಸಲಾಗಿದೆ. ಜು.12ರಂದು ರಾಯ್ಕಲ್ ಜಿಲ್ಲೆಯಲ್ಲಿ ಪ್ರವಾಹದ ಬಗ್ಗೆ ವರದಿ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಪತ್ರಕರ್ತ ಜಮೀರ್(36) ಮೃತದೇಹವು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಕೇರಳದ ಕೋಜಿಕೋಡ್‌ನ ವೆಲ್ಲಯಿಲ್ ಕರಾವಳಿ ತೀರದ ಬಳಿ ಶುಕ್ರವಾರ ಬೆಳಗ್ಗೆ ಚಂಡಮಾರುತ ಎದ್ದಿದ್ದು, ಸ್ಥಳೀಯರ ಜನಜೀವನಕ್ಕೆ ಅಡ್ಡಿ ಮಾಡಿದೆ. ಸುಮಾರು 10 ನಿಮಿಷಗಳ ಕಾಲ ಉಂಟಾದ ಚಂಡಮಾರುತದಿಂದಾಗಿ ಅನೇಕ ದೋಣಿಗಳು ತಲೆ ಕೆಳಗಾಗಿವೆ ಹಾಗೂ ಹತ್ತಿರದ ಮನೆಗಳಿಗೆ ಹಾನಿಯುಂಟಾಗಿದೆ. ವರನ ಮನೆಗೆ ದೋಣಿ ಪ್ರಯಾಣ
ಜಲಾವೃತವಾಗಿದ್ದ ರಸ್ತೆಯಲ್ಲಿ ಪ್ರಯಾಣಿಸಲಾಗದೆ, ವಧುವೊಬ್ಬರು ವರನ ಮನೆಗೆ ದೋಣಿಯಲ್ಲಿ ಪ್ರಯಾಣಿಸಿ ಮದುವೆಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕೋಣಸೀಮ ಜಿಲ್ಲೆಯ ಪ್ರಶಾಂತಿ ಅದೇ ಜಿಲ್ಲೆಯ ವರ ಅಶೋಕ್‌ರನ್ನು ಇತ್ತೀಚೆಗೆ ವರಿಸಿದ್ದಾರೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ನಗರಗಳು ಮತ್ತು ರಸ್ತೆಗಳು ಜಲಾವೃತವಾಗಿದೆ. ಆದರೆ ಮದುವೆ ಮುಂದೆ ಹಾಕಲು ಒಪ್ಪದ ಪ್ರಶಾಂತಿ ದೋಣಿ ಮೂಲಕ ಅಶೋಕ್ ಮನೆಗೆ ತೆರಳಲು ನಿರ್ಧರಿಸಿದ್ದಾರೆ. ವಧುವಾಗಿ ಸಿಂಗಾರಗೊಂಡ ಪ್ರಶಾಂತಿ ತಮ್ಮ ಕುಟುಂಬದ ಜತೆ ದೋಣಿಯಲ್ಲಿ ಅಶೋಕ್ ಮನೆಯತ್ತ ತೆರಳುತ್ತಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.