Advertisement
ಕಟ್ಟಡ ಜೀರ್ಣವಾಗಿರುವ ಕಾರಣ ಅಪಾಯ ಸಂಭವಿಸಬಹುದು ಎಂಬ ದೂರ ಗ್ರಹಿಕೆಯಿಂದ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮತ್ತು ಕೊಳ್ನಾಡು ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಚರ್ಚಿಸಿ, ಕೇವಲ 5 ದಿನಗಳ ಹಿಂದೆ ವಿದ್ಯಾರ್ಥಿಗಳನ್ನು ಮತ್ತೂಂದು ಕಟ್ಟಡಕ್ಕೆ ಸ್ಥಳಾಂತರಿಸಿದ್ದರು.
ಈ ಶಾಲೆಗೆ 92 ವರ್ಷಗಳಾಗಿದ್ದು 6 ಕೊಠಡಿಗಳಿವೆ. 1ರಿಂದ 8ನೇ ತರಗತಿವರೆಗೆ ಒಟ್ಟು 93 ಮಕ್ಕಳಿದ್ದಾರೆ. 6 ಶಿಕ್ಷಕರ ಅಗತ್ಯ ವಿದ್ದು 4 ಮಂದಿ ಇದ್ದು ಇನ್ನೆರಡು ಹುದ್ದೆಗಳು ಖಾಲಿಯಾಗಿವೆ. ಅತಿಥಿ ಶಿಕ್ಷಕರನ್ನು ಶ್ರೀ ವಾರಾಹೀ ಯುವಕ ಮಂಡಲ ಮತ್ತು ಮಕ್ಕಳ ಹೆತ್ತವರು ನೇಮಿಸಿದ್ದಾರೆ. ದುಬಾೖಯ ಉದ್ಯಮಿ ರಾಜಶೇಖರ ಚೌಟ ಮತ್ತು ಇತರರು ಸೇರಿ ಖರೀದಿಸಿದ ಬಸ್‌ನಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಹೆತ್ತವರು, ದಾನಿಗಳು ಕೈಜೋಡಿಸಿದ್ದರೂ ಈ ಶಾಲೆಗೆ ಇಲಾಖೆಯ ಸ್ಪಂದನವಿಲ್ಲ ಎಂದು ಇಲ್ಲಿನ ಹೆತ್ತವರು ದೂರಿದ್ದಾರೆ.