Advertisement

ವಿಜಯಪುರ: ಸಿಡಿಲಿಗೆ ಜೋಡೆತ್ತು ಬಲಿ; ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ

11:45 AM Jun 01, 2022 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ ಸಂದರ್ಭದಲ್ಲಿ ಸಿಡಿಲಿಗೆ ಜೋಡೆತ್ತು ಹಾಗೂ ಬಿರುಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿ ಹಾನಿಯಾದ ಘಟನೆಗಳು ವರದಿಯಾಗಿವೆ.

Advertisement

ಸಿಡಿಲಿಗೆ ಜೋಡೆತ್ತು ಬಲಿ :

ಸಿಡಿಲು ಬಡಿದು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಖಾನಿಕೇರಿ ಗ್ರಾಮದ ಗದ್ಯಪ್ಪ ಬಸನಗೌಡ ಪಾಟೀಲ ಎಂಬವರಿಗೆ ಸೇರಿದ ಜೋಡೆತ್ತು, ಮೃತಪಟ್ಟುವೆ. ಈ ಎರಡು ಎತ್ತುಗಳ ಸಾವಿನಿಂದ ರೈತ ಗದ್ಯಪ್ಪ ಅವರಿಗೆ  ಸುಮಾರು 80 ಸಾವಿರ ರೂ.‌ ನಷ್ಟವಾಗಿದೆ.

ಸ್ಥಳಕ್ಕೆ ಕಂದಾಯ ನಿರೀಕ್ಷಕ ಎನ್‌.ಬಿ ದೂರೆ, ಎಎಸ್ಐ ಎ.ಎಸ್. ನ್ಯಾಮಣ್ಣವರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಲಕ್ಷಾಂತರ ಮೌಲ್ಯದ ಬಾಳೆ ಹಾನಿ :

Advertisement

ಕಳೆದ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ರೈತ ಈರಪ್ಪ ಮಲ್ಲಪ್ಪ ಕಸಬೇಗೌಡರ ಇವರಿಗೆ ಸೇರಿದ ತೋಟದಲ್ಲಿ ಬೆಳೆದಿದ್ದ ಬಾಳೆ‌ ಬೆಳೆ ಸಂಪೂರ್ಣ ನೆಲಕ್ಕೆ ಉರುಳಿ, ಭಾರಿ ನಷ್ಟವಾಗಿದೆ.

ಒಂದೂವರೆ ಎಕರೆ ತೋಟದಲ್ಲಿ ರೈತ ಈರಪ್ಪ ಕಸಬೇಗೌಡರ ಸುಮಾರು 350 ಬಾಳೆ ಬೆಳೆದಿದ್ದರು.‌ ಇನ್ನು 2-3 ವಾರಗಳಲ್ಲಿ ಕೊಯ್ಲಿಗೆ ಬರಲಿದ್ದ ಬಾಳೆ ಇದೀಗ ನೆಲಕ್ಕೆ ಉರಳಿದೆ.

ಸಂಪೂರ್ಣ ಬಾಳೆ ನೆಲಕ್ಕುರುಳಿದ ಕಾರಣ ಹತ್ತಾರು ಸಾವಿರ ರೂ. .ಖರ್ಚು ಮಾಡಿ ಬೆಳದ ಬಾಳೆಯಿಂದ ಲಕ್ಷಾಂತರ ರೂ.‌ಆದಾಯದ ನಿರೀಕ್ಷೆಯಲ್ಲಿದ್ದ  ಸಂಕಷ್ಟ ಎದುರಾಗಿದೆ.

ಪರಿಹಾರಕ್ಕೆ ಆಗ್ರಹ :

ಸರ್ಕಾರ ವಿಳಂಬ ಮಾಡದೇ ಜೋಡೆತ್ತು ಕಳೆದುಕೊಂಡಿರುವ ಗದ್ಯಪ್ಪ ಪಾಟೀಲ, ಬಾಳೆ ಬೆಳೆ ಹಾನಿಯಿಂದ ನಷ್ಟ ಅನುಭಸಿರುವ ಈರಪ್ಪ ಕಸಬೇಗೌಡರ ಇವರಿಗೆ ಪ್ರಕೃತಿ ವಿಕೋಪ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next