ಉಡುಪಿ ನಗರದಲ್ಲಿ ಮಧ್ಯಾಹ್ನದವರೆಗೂ ಕಡು ಬಿಸಿಲಿನ ವಾತಾವರಣವಿತ್ತು. ಸಂಜೆಯ ವೇಳೆ ಏಕಾಏಕಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸಂಜೆ 5ರ ಸಮಯ ಮಳೆ ಸುರಿಯಲಾರಂಭಿಸಿದೆ. ಬ್ರಹ್ಮಾವರ, ಕಾಪು, ಮಲ್ಪೆ, ಕೋಟ, ಬ್ರಹ್ಮಾವರದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ.
Advertisement
ಕುಂದಾಪುರಕುಂದಾಪುರ: ಕುಂದಾಪುರ ಸೇರಿದಂತೆ ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಕೊಲ್ಲೂರು, ಜಡ್ಕಲ್, ಮುದೂರು, ವಂಡ್ಸೆ, ಬಸೂÅರು, ತೆಕ್ಕಟ್ಟೆ, ಕೋಟೇಶ್ವರ ಸೇರಿದಂತೆ ಹಲವೆಡೆಗಳಲ್ಲಿ ಉತ್ತಮ ಮಳೆ ಸುರಿದಿದೆ.
ಕಾರ್ಕಳ: ತಾಲೂಕಿನಲ್ಲಿ ಶನಿವಾರ ಸಂಜೆ ಸುರಿದ ಮಳೆ ಹಾಗೂ ಸಿಡಿಲಿಗೆ ಕೆಲವೆಡೆ ಹಾನಿ ಸಂಭವಿಸಿದೆ.
ಹೆರ್ಮುಂಡೆ ಪಡುಮನೆ ನಿವಾಸಿ ವಿನೋದ್ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಅಂದಾಜು 10 ಸಾವಿರ ರೂ. ನಷ್ಟವಾಗಿದೆ. ಮರ್ಣೆಯ ದೂದ ಮುಗೇರ ಅವರ ಮನೆಗೆ ಸಿಡಿಲು ಬಡಿದು 10 ಸಾವಿರ ರೂ. ನಷ್ಟವಾಗಿದೆ. ಯರ್ಲಪ್ಪಾಡಿ ನಿವಾಸಿ ಸಿದ್ದು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಅಂದಾಜು 10 ಸಾವಿರ ರೂ. ನಷ್ಟ ಉಂಟಾಗಿದೆ. ಇನ್ನು ಹಲವೆಡೆ ಮಳೆ ಹಾಗೂ ಸಿಡಿಲು ಬಡಿದು ಸಣ್ಣಪುಟ್ಟ ಹಾನಿ ಸಂಭವಿಸಿದೆ. ಹೆಬ್ರಿ ತಾಲೂಕಿನ ವಿವಿಧೆಡೆಗಳಲ್ಲೂ ಮಳೆಯಾದ ಬಗ್ಗೆ ವರದಿಗಳು ಬಂದಿವೆ.