Advertisement
ಕೊರೋನಾ ಸೋಂಕಿನ ಪ್ರಭಾವದಿಂದ ಈಗಾಗಲೇ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಗ್ರಾಮಸ್ಥರು ಸಂಜೆ ಸುರಿದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಮಳೆಯ ಆರ್ಭಟಕ್ಕೆ ಕೆಲವೊಂದು ಕಾಲುವೆಗಳು ತುಂಬಿ ಹರಿಯುತ್ತಿದ್ದು ಸುಮಾರು ತಿಂಗಳ ನಂತರ ಹರಿಯುತ್ತಿರುವ ನೀರನ್ನು ಕಂಡು ಗ್ರಾಮಸ್ಥರು ಕಣ್ತುಂಬಿಸಿಕೊಂಡಿದ್ದಾರೆ ಜೊತೆಗೆ ಮಳೆಯಿಂದ ಬೆಳೆಗಳು ಸಹ ನಾಶವಾಗಿದೆಯೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
Related Articles
Advertisement
ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯಲ್ಲಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿದೆ ಎಂಬ ದೂರುಗಳು ಕೇಳಿ ಬಂದಿದೆ ತಿಮ್ಮನಾಯಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಚೆಕ್‍ಡ್ಯಾಂಗಳು ತುಂಬಿ ಹರಿದಿದೆ ಮಳೆಯಿಂದ ಆಗಿರುವ ಹಾನಿಯಾಗಿರುವ ಕುರಿತು ಸರ್ವೇ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ.– ಬಿ.ಎಸ್.ರಾಜೀವ್ ತಹಶೀಲ್ದಾರ್ ಶಿಡ್ಲಘಟ್ಟ ತಾಲೂಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೆ ಮಳೆಯಾಗಿದೆ ಕಾಲುವೆ ಮತ್ತು ಚೆಕ್‍ಡ್ಯಾಂ ತುಂಬಿ ಹರಿಯುತ್ತಿದೆ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ತಾಲೂಕು ಆಡಳಿತ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. – ಕೃಷ್ಣಪ್ಪ ಅಧ್ಯಕ್ಷ ತಿಮ್ಮನಾಯಕನಹಳ್ಳಿ ಗ್ರಾಪಂ ಶಿಡ್ಲಘಟ್ಟ ತಾಲೂಕು. ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಸುತ್ತಮುತ್ತ ಸಂಜೆ ಮಳೆಯಾಗಿದೆ ಕೆಲವೊಂದು ಪ್ರದೇಶಗಳಲ್ಲಿ ಮನೆ ಛಾವಣಿಗಳು ಹಾನಿಯಾಗಿರುವ ದೂರು ಕೇಳಿ ಬರುತ್ತಿದೆ ಬೆಳಿಗ್ಗೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ. – ನಾಗರಾಜ್ ಪಿಡಿಓ ತಿಮ್ಮನಾಯಕನಹಳ್ಳಿ ಗ್ರಾಪಂ ಶಿಡ್ಲಘಟ್ಟ ತಾಲೂಕು.