Advertisement

ವರುಣನ‌ ಆರ್ಭಟ : ತುಂಬಿ ಹರಿಯುತ್ತಿರುವ ಬೋಳಪ್ಪನಹಳ್ಳಿ ಕೆರೆ

08:09 AM Aug 30, 2022 | Team Udayavani |

ರಾಮನಗರ‌ : ವರುಣನ‌ ಆರ್ಭಟ ಮುಂದುವರಿದಿದೆ ತಡರಾತ್ರಿ ಗುಡುಗು ಸಹಿತ ಮಿಂಚಿನ‌ ಭರಾಟೆ ಜೋರಾಗಿದ್ದು ಆತಂಕ ಹೆಚ್ಚಿಸಿದೆ.‌ ಸಿಡಿಲು‌ ಮತ್ತು‌‌ ಗುಡುಗಿನ ಅಬ್ಬರಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ.

Advertisement

ಸತತ ಮೂರನೇ ದಿನವಾದ‌ ಇಂದೂ ಕೂಡ ಮಳೆ‌ ಜೋರಾಗಿ‌ ಸುರಿಯಲಾರಂಭಿಸಿದ್ದು ಬೋಳಪ್ಪನ‌ಹಳ್ಳಿಕೆರೆ ಭಾಗದ ನಾಗರೀಕರು ಆತಂಕದಲ್ಲಿರುವಂತೆ ಮಾಡಿದೆ‌ .

ಬೋಳಪ್ಪನಹಳ್ಳಿ ಕೆರೆ ಏರಿ ಮೇಲೆ ಈಗಾಗಲೇ ಎರಡು ಕಡೆ ಕುಸಿತ ಕಂಡಿದ್ದು ‌ಏರಿ ಒಡೆದು ಹೋಗುವ ಭೀತಿ ಕೂಡ ಇದೆ. ಅಕಸ್ಮಾತ್ ಅಂತಹ ಅನಾಹುತ ಜರುಗಿದರೆ‌ ಸಾಕಷ್ಟು‌ ಮನೆಗಳು ಜಲಾವೃತವಾಗುತ್ತವೆ. ಕೋಡಿಪುರ , ಮಾಗಡಿ ರಸ್ತೆ ಸೇರಿದಂತೆ ನಗರದ‌ ಪ್ರಮುಖ ರಸ್ತೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿನ ನೂರಕ್ಕೂ ಹೆಚ್ಚು ಕಟ್ಟಡಗಳು ಜಲಾವೃತವಾಗಲಿವೆ.

ಈಗಾಗಲೇ ನೆರೆಪರಿಹಾರ ತಂಡ ಮುಂಜಾಗ್ರತಾ ಕ್ರಮವಾಗಿ ಕೋಡಿ ದೊಡ್ಡದು ಮಾಡಿದ್ದು ನೀರು ಜೋರಾಗಿ ಹರಿದು ಹೋಗುವಂತೆ ಮಾಡಲಾಗಿತ್ತು . ಅದೂ ಕೂಡ ಹಲವು ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತ್ತು.‌ ಅದೃಷ್ಠವಶಾತ್ ಹಾನಿಯಾಗಿಲ್ಲ‌ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಮತ್ತೆ ಮಳೆ‌ಹೆಚ್ಚಾಗಿದ್ದು ಆತಂಕದಲ್ಲೇ ದಿನದೂಡುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next