Advertisement

ಮಧುಗಿರಿ ಸುತ್ತಮುತ್ತ ಭಾರಿ ಮಳೆ : ಮನೆ ಕುಸಿದು ವೃದ್ದೆ ಸಾವು

07:46 AM Oct 13, 2022 | Team Udayavani |

ಮಧುಗಿರಿ ; ಬುಧವಾರ ರಾತ್ರಿ ಸುರಿದ ಮಳೆಗೆ ಮನೆಕುಸಿದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಕಸಬಾ ತುಂಗೋಟಿ ಗ್ರಾಮದ ಚೌಡಮ್ಮ (78) ಮೃತ ವೃದ್ಧೆಯಾಗಿದ್ದು, ಮನೆಯಲ್ಲಿ ಒಬ್ಬರೇ ಮಲಗಿದ್ದಾಗ ಘಟನೆ ನಡೆದಿದೆ.

ವೃದ್ಧೆಗೆ ಕುಟುಂಬಸ್ಥರಿದ್ದು ಬೆಂಗಳೂರು ಹಾಗೂ ಇತರೆಡೆ ನೆಲಸಿದ್ದಾರೆ ಎನ್ನಲಾಗಿದ್ದು. ಪತಿಯ ನಿಧನದ ನಂತರ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇವರು ಡಿ.ವಿ.ಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ ಎಂಬುವವರ ಅಜ್ಜಿಯಾಗಿದ್ದಾರೆ.

ಸ್ಥಳಕ್ಕೆ ಕಂದಾಯಾಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿದ್ದು ಮೃತದೇಹ ಹೊರ ತಗೆದರು. ಪ್ರಕರಣ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : ವಾಷಿಂಗ್ಟನ್‌: ಅ.24ರಂದು ವೈಟ್‌ಹೌಸ್‌ನಲ್ಲಿ ದೀಪಾವಳಿ ಸಂಭ್ರಮ

Advertisement
Advertisement

Udayavani is now on Telegram. Click here to join our channel and stay updated with the latest news.

Next