ಮಂಗಳೂರು ನಗರದಲ್ಲಿ ದಿನ ವಿಡೀ ಬಿಸಿಲು ಮತ್ತು ಮೋಡ ದಿಂದ ಕೂಡಿದ ವಾತಾವರಣ ಇತ್ತು.
ಮಂಗಳೂರಿನಲ್ಲಿ 34 ಡಿ.ಸೆ. ಗರಿಷ್ಠ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
Advertisement
ಒಂದು ಗಂಟೆ ರಸ್ತೆ ಬ್ಲಾಕ್ಗುಂಡ್ಯ ಪ್ರದೇಶದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ. ಗಾಳಿಗೆ ಮರಗಳು ರಸ್ತೆಗುರುಳಿದ್ದು, ಮಂಗಳೂರು- ಬೆಂಗಳೂರು ನಡುವಣ ವಾಹನ ಸಂಚಾರ ಒಂದು ಗಂಟೆ ಬ್ಲಾಕ್ ಆಗಿತ್ತು. ಈ ಭಾಗದಲ್ಲಿ ವಿದ್ಯುತ್ ಕಂಬ ಧರೆ ಗುರುಳಿದ್ದು, ಕೆಲವು ಅಂಗಡಿ ಗಳಿಗೆ ಹಾನಿಯಾಗಿದೆ. ಮನೆ ಹೆಂಚು ಹಾರಿ ಹೋಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಎ. 29 ಮತ್ತು 29ರಂದು ಕರಾವಳಿ ಭಾಗ ದಲ್ಲಿ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಉತ್ತಮ ಮಳೆ
Related Articles
Advertisement
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲಮೊಗ್ರು ಕಲ್ಮಕಾರು, ಹರಿಹರ ಪಳ್ಳತ್ತಡ್ಕ, ಐನೆಕಿದು, ಗುತ್ತಿಗಾರು, ಬಳ್ಪ, ಯೇನೆಕಲ್ಲು, ಕೈಕಂಬ, ಪಂಜ ಸೇರಿದಂತೆ ಕೆಲವೆಡೆ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಕೇವಲ 5 ನಿಮಿಷದ ಹನಿ ಮಳೆಯಾಗಿದ್ದು, ಬಳಿಕ ಮೋಡ ಕವಿದ ವಾತಾವರಣ ಕಂಡುಬಂದಿದೆ.
ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು. ಮಲಿನಗೊಂಡಿದ್ದ ದರ್ಪಣ ತೀರ್ಥದಲ್ಲಿ ನೀರು ಹರಿದಿದ್ದು, ಒಮ್ಮೆಗೆ ನಿರಾಳವಾಗಿದೆ.
ಸೇತುವೆ ಮೇಲೆ ನಿಂತ ನೀರುಸುಬ್ರಹ್ಮಣ್ಯದ ಕನ್ನಡಿ ಹೊಳೆ ಸೇತುವೆಯ ಮೇಲೆ ಪೂರ್ತಿ ನೀರು ತುಂಬಿ ನಿಂತು ವಾಹನಗಳಿಗೆ ಸಂಚರಿಸಲು ಕಷ್ಟವಾಗಿತ್ತು. ಸುಬ್ರಹ್ಮಣ್ಯದ ಸಮಾಜಸೇವಕ ಡಾ| ರವಿ ಕಕ್ಕೆಬಾದ ಅವರು ಸಹೋದ್ಯೋಗಿಗಳೊಂದಿಗೆ ಸೇರಿ ಕೊಂಡು ನೀರು ಸ್ವಲ್ಪ ಮಟ್ಟಿಗೆ ಹರಿದುಹೋಗುವಂತೆ ಮಾಡಿದರು. ಬೆಳ್ತಂಗಡಿ
ಬೆಳ್ತಂಗಡಿ: ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜಿಲ್ಲೆಯ ಜನರಿಗೆ ವರುಣ ಕೃಪೆ ತೋರಿ ದ್ದಾನೆ. ಮಂಗಳವಾರ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಅಳದಂಗಡಿ, ನಿಡ್ಲೆ, ಮುಂಡಾಜೆ, ಲಾೖಲ, ದಿಡುಪೆ, ನಡ, ಕಲ್ಮಂಜ, ಚಿಬಿದ್ರೆ, ಚಾರ್ಮಾಡಿ, ಕಡಿರುದ್ಯಾವರ ಮೊದಲಾದ ಗ್ರಾಮ ಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಬಿಸಿಲಿನಿಂದ ಕೂಡಿದ್ದ ವಾತಾವರಣವಿದ್ದು, ಸಂಜೆಯಾಗು ತ್ತಲೇ ಮೋಡ ಕವಿಯಲಾರಂಭಿಸಿ ವಿವಿಧೆಡೆ ಸಾಧಾರಣ ಮಳೆಯಾಗಿದ್ದು ಕೆಲವೆಡೆ ಹನಿ ಮಳೆಯಾಗಿದೆ. ನದಿ ಮೂಲವನ್ನೇ ಆಶ್ರಯಿಸಿರುವ ಕೃಷಿ ತೋಟಗಳಿಗೆ ನೀರಿಲ್ಲದೆ ಪರದಾಡುತ್ತಿದ್ದ ಸಮಯದಲ್ಲಿ ಕೊಂಚ ನಿರಾಳವಾಗಿಸಿದೆ. ಸಂಜೆ 5ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಸುರಿಯಿತು. ಉಳಿದ ಕೆಲವು ಗ್ರಾಮಗಳಲ್ಲಿ ತುಂತುರು ಮಳೆ ಸುರಿದಿದೆ. ಎ. 7ರಂದು ತಾಲೂಕಿನ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿತ್ತು. ಎರಡು ವಾರಗಳ ಬಳಿಕ ಮಳೆ ಸುರಿದಿದ್ದರಿಂದ ಕೊಂಚ ತಂಪಾದ ವಾತಾವರಣ ಕಂಡುಬಂತು.