ಹುಣಸೂರು : ಕೆಲವು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಮಳೆಗೆ ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ, ರಹಮತ್ ಮೊಹಲ್ಲಾದ ತಗ್ಗು ಪ್ರದೇಶದಲ್ಲಿರುವ 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಬುಧವಾರ ರಾತ್ರಿ 8ರ ವೇಳೆಗೆ ಗುಡುಗು ಮಿಂಚು ಸಿಡಿಲು ಸಹಿತ ಆರಂಭವಾದ ಮಳೆ ಧಾರಾಕಾರವಾಗಿ 11 ರವರೆಗೂ ಸುರಿಯಿತು.
ನಂತರ ಮಳೆ ಕಡೆಮೆಯಾದರೂ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೆ ರಜಾಕ್ ಮೊಹಲ್ಲಾ, ಶಬ್ಬೀರ್ ನಗರ, ಸಾಕೇತ ಬಡಾವಣೆಯ ರಸ್ತೆಯಲ್ಲಿ ಬೆಳಗಿನ ಜಾವದ ವರೆಗೂ ನೀರು ಹರಿಯುತ್ತಿತ್ತು.
ಅಗ್ನಿಶಾಮಕ ಸಿಬ್ಬಂದಿಗಳು, ನಗರಸಭೆ ಅಧಿಕಾರಿಗಳು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದರಾಗಿದ್ದರೂ ಮಳೆ ವೇಗ ಕಡಿಮೆಯಾಗಿದ್ದರಿಂದ ನಿವಾಸಿಗಳು ನಿಟ್ಟುಸಿರು ಬಿಟ್ಟರೂ ಗುರುವಾರ ಬೆಳಗ್ಗೆಯೂ ರಸ್ತೆಗಳ ಮೇಲೆ ನೀರು ಹರಿಯುತ್ತಲೇ ಇದೆ.
ಇದನ್ನೂ ಓದಿ : 2024ಕ್ಕೆ ಹೊಂಡಾದಿಂದ ಫ್ಲೆಕ್ಸಿ ಫ್ಯುಯಲ್ ಬೈಕ್ ಬಿಡುಗಡೆ