Advertisement

Rain: ಹುಣಸೂರು ತಾಲೂಕಿನಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ

04:49 PM Oct 09, 2023 | Team Udayavani |

ಹುಣಸೂರು: ತಾಲೂಕಿನಾದ್ಯಂತ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಬೆಳಗ್ಗೆಯಿಂದಲೇ ಬಿರು ಬಿಸಿಲು ಸಂಜೆ ವೇಳೆ ಬಿಟ್ಟು ಬಿಟ್ಟು ಬರುತ್ತಿದ್ದ ಅಲ್ಪ ಮಳೆಯಿಂದಾಗಿ ತಾಪಮಾನ ಏರಿಕೆಯಾಗಿ ಬಾನುವಾರ 32 ಡಿಗ್ರಿಗೆ ತಲುಪಿತ್ತು.

Advertisement

ಸೋಮವಾರ ಬೆಳಗ್ಗೆ ಮೋಡ ಮುಸುಕಿದ ವಾತಾವರಣ ವಿತ್ತಾದರೂ ನಂತರದಲ್ಲಿ ಬಿಸಿಲು ಜೋರಾಗಿತ್ತು. ಮಧ್ಯಾಹ್ನ ಒಮ್ಮೆಲೆ ಮೋಡ ಕವಿದು ಭಾರಿ ಗುಡುಗು- ಮಿಂಚು ಸಿಡಿಲು ಸಹಿತ ಮಳೆ ಆರಂಭಾಯಿತು.

ಒಮ್ಮೆಲೆ ಮಳೆ ಆರಂಭವಾಗಿದ್ದರಿಂದ ಮನೆಗಳಿಂದ ದಿನಸಿ ಖರೀದಿಸಲು ನಗರಕ್ಕೆ ಆಗಮಿಸಿದವರು ಅಂಗಡಿ ಮುಂದೆ ಆಶ್ರಯ ಪಡೆದರು.

ಇನ್ನು ಸರಕಾರಿ ಶಾಲೆಗಳಿಗೆ ರಜೆ ಇದ್ದುದ್ದರಿಂದ ಹೆಚ್ಚಿನ ಮಕ್ಕಳಿಗೆ ಮನೆಗೆ ತೆರಳಲು ಸಮಸ್ಯೆ ಆಗಿಲ್ಲವಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳು ಮಳೆಯಲ್ಲಿ ನೆನೆಯುತ್ತಾ ಪರದಾಡುತ್ತಲೇ ಬಸ್ ನಿಲ್ದಾಣಕ್ಕೆ ತೆರಳಿದರು.

ಯಾವುದೇ ಅನಾಹಿತವಾಗಿರುವ ಬಗ್ಗೆ ಸಂಜೆ ವರೆಗೆ ಮಾಹಿತಿ ಬಂದಿಲ್ಲವೆಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Gaza ಮೇಲೆ ಇಸ್ರೇಲ್ ಸಂಪೂರ್ಣ ದಿಗ್ಬಂಧನ: ಆಹಾರ, ಇಂಧನಕ್ಕೂ ತಡೆ

Advertisement

Udayavani is now on Telegram. Click here to join our channel and stay updated with the latest news.

Next