ಹೆಬ್ರಿ: ಹೆಬ್ರಿ ಸುತ್ತಮುತ್ತ ಜೂ.17ರಂದು ಬೀಸಿದ ಭಾರಿ ಗಾಳಿ ಮಳೆಗೆ ಅಡಿಕೆ ಹಾಗೂ ರಸ್ತೆ ಬದಿಯ ಬೃಹತ್ ಮರಗಳು ಧರೆಗುರುಳಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಕುಚ್ಚೂರು ಹಾಲಿಕೋಡ್ಲು ರಸ್ತೆ ಬದಿಯಲ್ಲಿದ್ದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಯಾಗಿತ್ತು. ವಿಷಯ ತಿಳಿದ ಕೂಡಲೇ ಸಮಾಜಿಕ ಕಾಯ೯ಕತ೯ ಶ್ರಿಕಾಂತ್ ಹಾಗು ಪಂಚಾಯತ್ ಸದಸ್ಯ ಮಹೇಶ್ ಶೆಟ್ಟಿ ಅವರ ಸಹಕಾರದೊಂದಿಗೆ ಹೆಬ್ರಿ ಮೆಸ್ಕಾಂ ಅಧಿಕಾರಿ ಲಕ್ಷ್ಮೀಶ್ ನೇತೃತ್ವದ ತಂಡ ಕೂಡಲೇ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಇದನ್ನೂ ಓದಿ :ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ: ಡಿಸಿಎಂ ಸ್ಪಷ್ಟನೆ
ರಸ್ತೆ ಬದಿ ಅಪಾಯಕಾರಿ ಮರ : ಕುಚ್ಚೂರು ಹಾಲಿಕೋಡ್ಲು ಮಾಗ೯ದಲಿ ರಸ್ತೆ ಗೆ ತಾಗಿ ಹಲವಾರು ಅಪಾಯಕಾರಿ ಮರಗಳಿದ್ದು ಇದನ್ನು ತೆರವುಗೊಳಿಸುವಂತೆ ಈ ಭಾಗದ ಸಮಾಜಿಕ ಕಾರ್ಯಕರ್ತ ಶ್ರೀಕಾಂತ್ ಅವರು ಸಂಬಂಧಪಟ್ಟವರ ಗಮನಕ್ಕೆ ಹಲವು ಬಾರಿ ವಿನಂತಿಸಿ ಪತ್ರಿಕೆಯಲ್ಲಿ ವರದಿ ಕೂಡ ಪ್ರಕಟಗೊಂಡಿತ್ತು. ಆದರೆ ಇದುವರೆಗೂ ಕೂಡ ಈ ಮರವನ್ನು ತೆರವುಗೊಳಿಸದೇ ಇರುವುದರಿಂದ ಮೆಸ್ಕಾಂಗೆ ನಷ್ಟ ವಾಗುತ್ತಿದೆ. ಮಳೆಗಾಲ ಆರಂಭವಾಗುವ ಮೊದಲು ಇಂತಹ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಯಾಕೇ ತೆರವುಗೊಳಿಸುತ್ತಿಲ್ಲ ಎಂದು ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.