Advertisement

ಭಾರೀ ಮಳೆಗೆ ಮನೆಗಳಿಗೆ ನುಗ್ಗಿದ ನೀರು: ಮನೆಗಳ ಕುಸಿತ

03:47 PM Oct 23, 2021 | Team Udayavani |

ಗುಡಿಬಂಡೆ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆ ರಸ್ತೆಗಳು ಜಲಾವೃತ್ತಗೊಂಡು, ರಾಜಕಾಲುವೆಗಳು ತುಂಬಿ ಹರಿದು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.

Advertisement

ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಬಿದ್ದ ಭಾರಿ ಮಳೆಗೆ ರಸ್ತೆಗಳು ಜಾಲವೃತ್ತಗೊಂಡು, ರಾಜಕಾಲುವೆಗಳು ಎಲ್ಲಾ ತುಂಬಿ ಹರಿದು ತಗ್ಗು ಪ್ರದೇಶಗಳಾದ ವಿನಾಯಕ ನಗರ, ಸೊಪ್ಪಿನಪೇಟೆ, ಖಾಜಿಪೇಟೆ, ಇನ್ನಿತರೆ ಜಾಗಗಳ ಮನೆಗಳಿಗೆ ನೀರು ನುಗ್ಗಿರುವುದರಿಂದ ಸರಿಸೃಪಗಳು, ಕೀಟಗಳು ನೀರನಲ್ಲಿ ಮನೆಗಳಿಗೆ ಎಲ್ಲಿ ಬರುತ್ತವೆಯೋ ಎಂಬ ಭಯದಲ್ಲಿ ಸಾರ್ವಜನಿಕರಿಗಳು ರಾತ್ರಿ ಇಡೀ ವಿದ್ಯುತ್ ತೊಂದರೆಯಾಗಿದ್ದರಿಂದ ರಾತ್ರಿ ಇಡೀ ಭಯಬೀತರಾಗಿ ಕಳೆದಿದ್ದಾರೆ.

ಮನೆಗಳಿಗೆ ಹಾನಿ: ಶುಕ್ರವಾರ ಸಂಜೆ ಬಿದ್ದ ಗುಡುಗು ಸಹಿತ ಭಾರಿ ಮಳೆಯಿಂದ ಪಟ್ಟಣದ ಒಂದೆರಡು ಮನೆಗಳಿಗೆ ಹಾನಿಯಾಗಿ ಬಿದ್ದು ಹೋಗಿರುತ್ತದೆ, ಆದರೆ ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿರುವುದಿಲ್ಲ.

ಸಂಚಾರಕ್ಕೆ ತೊಂದರೆ: ಸಂಜೆ ಬಿದ್ದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದರಿಂದ, ವಾಹನ ಸಂಚಾರಕ್ಕೆ ತೊಂದರೆಯಾಗಿ, ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next