ದೋಟಿಹಾಳ: ಸಮೀಪದ ಮುದೇನೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಶಾಲಾ ಆವರಣ ಸಂರ್ಪೂಣ ಜಲಾವೃತ ಗೊಂಡ ಕಾರಣ ಗುರುವಾರ ಶಾಲಾ ಮಕ್ಕಳು ಶಾಲೆಯ ಕಡೆಗೆ ಮುಖ ಮಾಡಲಿಲ್ಲ.
ಮಳೆಯಿಂದ ಗುರುವಾರ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದು ಇದರಿಂದ ಮಕ್ಕಳು ಮತ್ತು ಶಿಕ್ಷಕರು ಶಾಲೆಯ ಒಳಗೆ ಹೋಗಿ ಬರಲು ಹರಸಹಸ ಪಡುವಂತಾಗಿದೆ. ಶಾಲಾ ಆವರಣದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳು ಇದು. ಮಳೆಯಿಂದ ಸುಮಾರು 2ಅಡಿ ಎಷ್ಟು ಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿದೆ. ಶಾಲೆಗೆ ಆಗಮಿಸಿ ಮಕ್ಕಳು ಶಾಲೆಗೆ ಹೋಗಲು ದಾರಿ ಇಲ್ಲದ ಕಾರಣ ಮರಳಿ ಮನೆಗೆ ಹೋಗಿದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಶಾಲಾ ಆವರಣ ಸಮತಟ್ಟು ಮಾಡಲು ಲಕ್ಷಾಂತರ ರೂಪಾಯಿಗಳ ಹಣ ಖರ್ಚು ಮಾಡಿದರು ಮಳೆ ನೀರು ಮಾತ್ರ ಶಾಲೆಯ ಮೈದಾನ ಬಿಟ್ಟು ಮುಂದೆ ಸಾಗುತ್ತಿಲ್ಲ. ಮಳೆಯ ನೀರು ಶಾಲಾ ಆವರಣದಲ್ಲಿ ನೀರು ನಿಂತಿರುವುದು ಕಂಡು ರಸ್ತೆಯಲ್ಲಿ ಸಂಚರಿಸುವವರು. ಶಾಲಾ ಸುತ್ತಲೂ ಕೌಂಪೌAಡ ನಿರ್ಮಾಣ ಮಾಡಿದ್ದು. ಮಳೆ ನೀರು ಸರಿಯಾಗಿ ಹೋಗುವ ವ್ಯವಸ್ಥೆ ಇಲ್ಲದ ಕಾರಣ ಪ್ರತಿಸಲ ಮಳೆ ಬಂದಾಗ ಆವರಣದಲ್ಲಿ ನೀರು ನಿಂತು ಕೆರೆಯಂತೆ ಆಗುತ್ತದೆ ಎಂದು ಹೇಳುತ್ತಾರೆ.
ಹಣ ಖರ್ಚು ಮಾಡಲು ಯೋಜನೆಗಳನ್ನು ರೂಪಿಸಬೇಡಿ, ಸಮಸ್ಯೆ ಪರಿಹಾರಕ್ಕಾಗಿ ಯೋಜನೆಗಳನ್ನು ಸಿದ್ಧಪಡಿಸಿ ಎಂಬುವುದು ಶಿಕ್ಷಣ ಪ್ರೇಮಿಗಳ ಕಳಕಳಿಯಾಗಿದೆ.
ಇದನ್ನೂ ಓದಿ : ಜ್ಞಾನವಾಪಿ ಮಸೀದಿ ವಿವಾದ: ಕೋರ್ಟ್ ಗೆ ಸಲ್ಲಿಸಿದ ಸಮೀಕ್ಷೆಯ ವರದಿಯಲ್ಲೇನಿದೆ?