Advertisement

ಭಾರಿ ಮಳೆ: ಮೂಡಿಗೆರೆ, ಚಿಕ್ಕಮಗಳೂರಿನಲ್ಲಿ ಅವಾಂತರ

02:22 PM Apr 03, 2022 | Team Udayavani |

ಚಿಕ್ಕಮಗಳೂರು: ಕಳೆದ ರಾತ್ರಿ ಮೂಡಿಗೆರೆ ಚಿಕ್ಕಮಗಳೂರಿನಲ್ಲಿ ಸುರಿದ ಮಳೆಯ ಅವಾಂತರಗಳನ್ನು ಸೃಷ್ಟಿಸಿದೆ .

Advertisement

ಮೂಡಿಗೆರೆಯಲ್ಲಿ ಭಾರೀ ಮಳೆ ಬಂದಿದ್ದು ಮಹಾಮಳೆಗೆ ಮನೆಯ  ಮೇಲ್ಛಾವಣಿ  ಹಾರಿ ಹೋಗಿದೆ . ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಗಿರಿಜನ ಕಾಲೋನಿಯ ಕೂಲಿ ಕಾರ್ಮಿಕ  ಹರೀಶ್ ಮನೆಗೆ ಹಾನಿಯಾಗಿದೆ .

ಕಳೆದ ನಾಲ್ಕೈದು ದಿನದಿಂದ ಸಂಜೆ  ಈ ಭಾಗದಲ್ಲಿ ಮಳೆ ಸುರಿಯುತ್ತಲೇ ಇದೆ. ಭಾರೀ ಮಳೆಯಿಂದ ಜಿಲ್ಲಾದ್ಯಂತ ಅಲ್ಲಲ್ಲಿ ಸಣ್ಣ-ಪುಟ್ಟ ಅವಾಂತರ ಉಂಟಾಗಿದ್ದು ಜಿಲ್ಲಾ ಕೇಂದ್ರ ಚಿಕ್ಕಮಗ ಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ .

ಟಿಪ್ಪು ನಗರ ಸಮೀಪ , ಸಣ್ಣ  ಕಾಲುವೆಗೆ ದೊಡ್ಡ ಕಾಲುವೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ . ಸೇತುವೆಯಲ್ಲಿ ಭಾರಿ ಪ್ರಮಾಣದ ಕಸ ಕಡ್ಡಿ ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿಯದೆ , ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತವಾಗಿವೆ .

ಇಂದು ಬೆಳಿಗ್ಗೆ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ಸಿಬ್ಬಂದಿಯೊಂದಿಗೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ .

Advertisement

ಈ ವೇಳೆ ಕೆಲ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next