ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರೆದಿದ್ದು, ವರುಣನ ಅಬ್ಬರಕ್ಕೆ ಕೆಲ ಮನೆಗಳು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದರ್ಬಾರ್ ಪೇಟೆ ಗಣೇಶ್ ಅವರ ಮನೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಾಣಪಯದಿಂದ ಪಾರಾಗಿದ್ದಾರೆ. ಅದೇ ರೀತಿ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಸುನಿಲ್ ಎಂಬವರಿಗೆ ಸೇರಿದ ಮನೆಯೂ ಮಳೆಯ ಅಬ್ಬರಕ್ಕೆ ಕುಸಿದು ಬಿದ್ದಿದೆ. ಮನೆ ಒಳಗಿನ ಪೀಠೋಪಕರಣಗಳು, ಸಾಮಾಗ್ರಿಗಳು ಹಾನಿಗಳಾಗಿವೆ.
ತಾಲೂಕಿನ ಮಣಬೂರಿನಲ್ಲಿ ಮಳೆಗೆ ಕಿರು ಸೇತುವೆ ಕುಸಿದಿದೆ. ಇದರಿಂದ ಚಿಕ್ಕಮಗಳೂರು – ಮಣಬೂರು ಸಂಪರ್ಕ ಕಡಿತವಾಗಿದ್ದು,ರಸ್ತೆಗಳು ಕುಸಿಯುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.
ಇನ್ನೊಂದೆಡೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ದರೆಗುರುಳಿ ಹತ್ತಾರು ವಿದ್ಯುತ್ ಕಂಬಗಳು ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದೆ.
ಕೊಟ್ಟಿಗೆಹಾರ ದಿಂದ ಹೊರನಾಡು ಸಂಪರ್ಕಿಸುವ ಹೆದ್ದಾರಿಗೆ ಕೆಳಗೂರು ಸಮೀಪ ಮರ ಬಿದ್ದಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಗಿದ್ದು ಈಗ ಸಂಚಾರ ಸುಗಮವಾಗಿದೆ.