Advertisement

Bengaluru Rain: ಭಾರೀ ಧರೆಗುರುಳಿದ 118 ಮರಗಳು 

10:55 AM Jun 03, 2024 | Team Udayavani |

ಬೆಂಗಳೂರು: ಬಿರುಗಾಳಿ ಮಳೆಗೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಮರಗಳು ಧರೆಗುರಳಿವೆ. ಇನ್ನೂ ಕೆಲವು ಕಡೆಗಳಲ್ಲಿ ವಿದ್ಯುತ್‌ ಕಂಬಗಳ ಮೇಲೆ ಮರದ ರಂಬೆಕೊಂಬೆಗಳು ಬಿದ್ದಿವೆ. ಭಾನುವಾರ ರಾತ್ರಿ ಮಳೆಗೆ ಎಂಟು ವಲಯಗಳಲ್ಲಿ ಕಡೆಗಳಲ್ಲಿ 118 ಮರಗಳು, 128 ರಂಬೆ ಕೊಂಬೆಗಳು ಬಿದ್ದಿರುವ ಬಗ್ಗೆ ಪಾಲಿಕೆ ಸಹಾಯವಾಣಿಗೆ ದೂರು ಬಂದಿವೆ.

Advertisement

ಪಾಲಿಕೆ ಅರಣ ಸಿಬ್ಬಂದ್ದಿ ಮತ್ತು ಪೊಲೀಸರು 48 ಮರಗಳ ತೆರವು ನಡೆದಿದೆ ಎಂದು ಬಿಬಿಎಂಪಿ ಸಹಾಯವಾಣಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಮಾಗಡಿ ರಸ್ತೆ,ವಿಜಯನಗರ ಪೊಲೀಸ್‌ ಠಾಣೆ ಸಮೀಪ, ಬನಶಂಕರಿ 3ನೇ ಹಂತ, ಬನಶಂಕರಿ ಮೇಲ್ಸೇತುವೆ ಸಮೀಪ, ಜೆ.ಸಿ.ರಸ್ತೆ ಮತ್ತು ಕೋರಮಂಗಳಲ್ಲಿ 10ಕ್ಕೂ ಅಧಿಕ ಮರಗಳು ಬಿರುಗಾಳಿ ಮಳೆಯಿಂದಾಗಿ ನೆಲಕ್ಕುರುಳಿವೆ. ಆಟೋ ಚಾಲಕ ಪಾರು; ಕಾರ್‌ ಜಖಂ: ಬಶನಂಕರಿ ,ಕೋರಮಂಗಲ ಮತ್ತು ಮಹಾಲಕ್ಷ್ಮೀ ಲೇ ಔಟ್‌ನಲ್ಲಿ ಮತ್ತು ನೀಲ್‌ಸಂದ್ರದಲ್ಲಿ ಕಾರುಗಳ ಮೇಲೆ ಮರದ ರಂಬೆ-ಕೊಂಬೆಗಳು ಬಿದ್ದಿದ್ದು ಹಾನಿಯಾಗಿದೆ. ಆದರೆ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ರಾಮಕೃಷ್ಣ ಆಶ್ರಮದ ಆಶ್ರಮದ ಬಳಿ ಬೃಹತ್‌ ಮರ ಕಾರಿನ ಮೇಲೆ ಬಿದ್ದಿದ್ದು ಸಂಪೂರ್ಣ ಜಖಂ ಆಗಿದೆ. ಕೋರಮಂಗಲ ಬಳಿ ಲೈಟ್‌ ಕಂಬ ಮತ್ತು ಆಟೋ ಮೇಲೆ ಮರ ಮುರಿದು ಬಿದಿದ್ದು, ಅದೃಷ್ಟವಶಾತ್‌ ಆಟೋ ಚಾಲಕ ಪಾರಾಗಿದ್ದಾರೆ. ಪೀಣ್ಯ ಬಳಿ ಸರಕು ವಾಹನ ಟೆಂಪೋ ಮೇಲೆ ಮರ ಬಿದ್ದು ಕೆಲಕಾಲ ಅವಾಂತರ ಸೃಷ್ಟಿಯಾಗಿತ್ತು.

ಕಾರಿನ ಮೇಲೆ ಬಿದ್ದ ಮರ: ಪೀಣ್ಯದ ಅರವಿಂದ ಮೋಟಾರ್ಸ್‌ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿ ಸಿಲುಕಿರುವ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆ ವೆಗಾ ಸಿಟಿ ಮಾಲ್‌ ಬಳಿ ಮತ್ತು ಜಯನಗರದ 4ನೇ ಟಿ ಬ್ಲಾಕ್‌ ಬಳಿ ಮರ ಧರೆಗುರುಳಿದಿದೆ. ರಾಜಾಜಿನಗರದ ಮಂಜುನಾಥನಗರದಲ್ಲಿ ಮರ ಬಿದ್ದಿದೆ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ಮತ್ತು ಕೆಜಿ ರಸ್ತೆ ಪೋತೀಸ್‌ ಮುಂಭಾಗ ಬೃಹತ್‌ ಮರ ಧರೆಗಿರುಳಿದೆ. ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದಿದ್ದು, ಪಾನಿಪುರಿ ಅಂಗಡಿ ಸೇರಿ ಸುಮಾರು 10 ಬೈಕ್‌ಗಳು ಜಖಂಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next