ಬಂಟ್ವಾಳ: ತಾಲೂಕಿನ ಬಹುತೇಕ ಕಡೆ ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಹತ್ತಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತಾಲೂಕಿನ ಕಾಮಾಜೆ, ನರಿಕೊಂಬು ಭಾಗಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಗಾಳಿಯ ರಭಸಕ್ಕೆ ಸಾಕಷ್ಟು ಮನೆಗಳ ಮೇಲ್ಛಾವಣಿ ಸಂಪೂರ್ಣ ಹಾರಿದ್ದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ:ಪಾಣೆಮಂಗಳೂರು: ಗ್ಯಾಸ್ ಟ್ಯಾಂಕರ್- ಇಕೋ ಕಾರು ಅಪಘಾತ, ಆರು ಮಂದಿ ಗಂಭೀರ
ಕಾಮಾಜೆ, ದೈಪಲ, ಮೈರನ್ ಪಾದೆ ಪ್ರದೇಶದಲ್ಲಿ ತೆಂಗಿನ ಮರ, ಇತರ ಮರಗಳು ಧರೆಗುರುಳಿದ್ದು, ಬೃಹತ್ ವಿದ್ಯುತ್ ಕಂಬ ಟವರ್ ಗಳೇ ವಾಲಿ ನಿಂತಿದೆ. ಕಂದಾಯ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಕಡಲ ಕಿನಾರೆಗೆ ಬಂದು ನಿಂತ ಮೀನುಗಾರಿಕಾ ಬೋಟ್ ಗಳು!