ಬೆಳ್ತಂಗಡಿ: ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಚಾರ್ಮಾಡಿ ಘಾಟ್ ಮೂಡಿಗೆರೆ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಹಲವೆಡೆ ಮಣ್ಣು ಕುಸಿತವಾಗಿದೆ.
ಚಾರ್ಮಾಡಿ ಘಾಟಿ ಮಲೆಯ ಮಾರುತ ಹಾಗೂ 9ನೇ ತಿರುವಿನಲ್ಲಿ ಸಣ್ಣ ಪುಟ್ಟ ಮರಗಳು ಧರೆಗುರುಳಿದ್ದು ತೆರವು ಕಾರ್ಯ ನಡೆಸಲಾಗಿದೆ.
ಶುಕ್ರವಾರದಿಂದ ಮೂಡುಗೆರೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಅಣ್ಣಪ್ಪ ಬೆಟ್ಟ ಸಮೀಪ ಸಣ್ಣಪುಟ್ಟ ಕಲ್ಲುಗಳು ಜಾರಿ ಬಿದ್ದಿವೆ. ಚಾರ್ಮಡಿ ಘಾಟಿಯ ಅಲೇಖಾನ್ ಬಳಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ.
ಮಳೆ ಬಿರುಸಾಗಿರುವುದರಿಂದ ಹೇಮಾವತಿ ನದಿ ಹರಿವು ಹೆಚ್ಚಾಗಿದೆ ಎಂದು ಬನ್ಕಲ್ ವ್ಯಾಪ್ತಿಯ ಪೊಲೀಸರು ಮಾಹಿತಿ ತಿಳಿಸಿದ್ದಾರೆ.