Advertisement

ಅವಾಂತರ ಸೃಷ್ಟಿಸಿದ ವರುಣ

03:08 PM Sep 20, 2019 | Naveen |

ರಾಯಚೂರು: ಇಷ್ಟು ದಿನ ಬಾರದೆ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದ ವರುಣ ಈಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದು, ನಾನಾ ಅವಾಂತರ ಸೃಷ್ಟಿಸುತ್ತಿದ್ದಾನೆ. ದೇವದುರ್ಗ, ಲಿಂಗಸುಗೂರು ತಾಲೂಕಿನಲ್ಲಿ ಸಾಕಷ್ಟು ಕಡೆ ಹಾನಿ ಸಂಭವಿಸಿದರೆ, ಬೆಳೆಗೂ ಆಪತ್ತು ಎದುರಾಗುತ್ತಿದೆ.

Advertisement

ಮಂಗಳವಾರ ರಾತ್ರಿ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗಿತ್ತು. ಆದರೆ, ಅಷ್ಟೇನು ಹಾನಿಯಾಗಿರಲಿಲ್ಲ. ಬುಧವಾರ ರಾತ್ರಿಯೂ ಮಳೆ ಮುಂದುವರಿದ ಪರಿಣಾಮ ದೇವದುರ್ಗ ತಾಲೂಕಿನ ಗಲಗ ಬಳಿ ಎನ್‌ಆರ್‌ಬಿಸಿ 12ನೇ ವಿತರಣಾ ಕಾಲವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಇನ್ನು ದೇವದುರ್ಗ ಪಟ್ಟಣದಲ್ಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಸ್ಕಿಯ ಕೇಂದ್ರೀಯ ಶಾಲೆಗೆ ನೀರು ನುಗ್ಗಿದ್ದು, ಅಂಗನವಾಡಿ ಕೇಂದ್ರದ ದವಸ ಧಾನ್ಯ ಕೂಡ ಹಾಳಾಗಿದೆ. ರಾಯಚೂರು ತಾಲೂಕಿನ ಮಿಟ್ಟಿ ಮಲ್ಕಾಪುರ ಗ್ರಾಮದ ಸರ್ಕಾರಿ ಶಾಲೆಗೂ ಸಾಕಷ್ಟು ನೀರು ನುಗ್ಗಿದೆ. ಚರಂಡಿ ನೀರೆಲ್ಲ ಶಾಲೆಯೊಳಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಲೇ ಮಳೆ ಶುರುವಾಯಿತು. ಸಂಜೆ ಸರಿಸುಮಾರು ಒಂದು ಗಂಟೆಗೂ ಅಧಿಕ ಕಾಲ ಜೋರು ಮಳೆಯಾದರೆ, ಬಳಿಕ ಜಿಟಿ ಜಿಟಿ ಹಿಡಿಯಿತು.

ಎಲ್ಲಿ ಎಷ್ಟು ಮಳೆ: ಮಾನ್ವಿಯಲ್ಲಿ 18.2 ಮಿಮೀ, ಪಾಮನಕಲ್ಲೂರಿನಲ್ಲಿ 75.3 ಮಿಮೀ, ಹಾಲಾಪುರಿನಲ್ಲಿ 18 ಮಿಮೀ, ಕವಿತಾಳದಲ್ಲಿ 8 ಮಿಮೀ, ಮಲ್ಲಟ 21 ಮಿಮೀ, ಸಿರವಾರದಲ್ಲಿ 6.2 ಮಿಮೀ, ಕುರ್ಡಿಯಲ್ಲಿ 10 ಮಿಮೀ ಮತ್ತು ರಾಜಲಬಂಡಾದಲ್ಲಿ 8 ಮಿಮೀ ಮಳೆ ದಾಖಲಾಗಿದೆ. ಸಿಂಧನೂರಲ್ಲಿ 8.5 ಮಿಮೀ, ವಲ್ಕಂದಿನ್ನಿಯಲ್ಲಿ 17 ಮಿಮೀ, ಸಾಲಗುಂದಾದಲ್ಲಿ 77.6 ಮಿಮೀ, ಜಾಲಿಹಾಳದಲ್ಲಿ 18.02 ಮಿಮೀ, ಹುಡಾದಲ್ಲಿ 46 ಮಿಮೀ, ಗುಂಜಳ್ಳಿಯಲ್ಲಿ 11 ಮಿಮೀ, ಬಾದರ್ಲಿಯಲ್ಲಿ 11.2 ಮಿಮೀ ಮಳೆ ದಾಖಲಾಗಿದೆ. ದೇವದುರ್ಗದಲ್ಲಿ 81.6 ಮಿಮೀ, ಅರಕೇರಾದಲ್ಲಿ 7.2 ಮಿಮೀ, ಗಬ್ಬೂರಿನಲ್ಲಿ 4.1 ಮಿಮೀ, ಜಾಲಹಳ್ಳಿಯಲ್ಲಿ 28 ಮಿಮೀ ಮತ್ತು ಗಲಗನಲ್ಲಿ 121 ಮಿಮೀ ಮಳೆಯಾಗಿದೆ. ರಾಯಚೂರಿನಲ್ಲಿ 13 ಮಿಮೀ, ಯರಗೇರಾದಲ್ಲಿ 14 ಮಿಮೀ, ಗಿಲ್ಲೆಸೂಗೂರು ಹೋಬಳಿಯಲ್ಲಿ 30.5 ಮಿಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next