ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಗಾಳಿ-ಮಳೆಯಿಂದಾಗಿ ಎರಡು ಕಡೆ ಹೆದ್ದಾರಿ ಬದಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.
Advertisement
ಧರ್ಮಸ್ಥಳ – ಬೆಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಕುದ್ರಾಯದಲ್ಲಿ ರಸ್ತೆಗೆ ಮರ ಬಿದ್ದು 1 ತಾಸಿಗೂ ಹೆಚ್ಚುಕಾಲ ವಾಹನಗಳ ಸಾಲು ನಿಂತಿತ್ತು. ಧರ್ಮಸ್ಥಳ ಪೊಲೀ ಸರು ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.
ಮಂಗಳೂರಿನಲ್ಲಿ ಸಂಜೆ 7.30ಕ್ಕೆ ತುಂತುರು ಮಳೆಯಾಗಿದೆ. ಮದ್ದಡ್ಕ, ಗುರುವಾಯನಕೆರೆ, ಮೂರ್ಜೆ, ಪುಂಜಾಲಕಟ್ಟೆ, ವಾಮದಪದವು, ಕಾವಳಕಟ್ಟೆ, ವಗ್ಗ, ವೇಣೂರು, ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.ಶನಿವಾರ ಜಿಲ್ಲೆಯಲ್ಲಿ 36 ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 27 ಡಿ.ಸೆ. ಕನಿಷ್ಠ ಉಷ್ಣಾಂಶ ಇತ್ತು.