Advertisement

North India: ಭಾರೀ ಮಂಜು- 110 ವಿಮಾನ, 25 ರೈಲು ಸಂಚಾರ ವ್ಯತ್ಯಯ

12:06 AM Dec 28, 2023 | Team Udayavani |

ಹೊಸದಿಲ್ಲಿ: ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಚಳಿ ಮತ್ತು ಮಂಜು ಮುಸುಕಿದ ವಾತಾವರಣದಿಂದಾಗಿ ಬುಧವಾರ ಬೆಳ್ಳಂಬೆಳಗ್ಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಮಂಜು ಮುಸುಕಿದ ವಾತಾವರಣದಿಂದ ಉಂಟಾದ ಸರಣಿ ಅಪಘಾತಗಳಲ್ಲಿ ಆರು ಮಂದಿ ಅಸುನೀಗಿದ್ದಾರೆ.

Advertisement

110ಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಜತೆಗೆ 25 ರೈಲುಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ ಅಥವಾ ಸಂಚಾರ ರದ್ದುಗೊಳಿಸಲಾಗಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ವಾಹನಗಳು ಹೆಡ್‌ಲೈಟ್‌ ಉರಿಸಿದರೂ, ಮುಂದಿನ ದಾರಿ ಕಾಣದಷ್ಟು ಮಂಜು ಮುಸುಕಿತ್ತು.

ದಿಲ್ಲಿ- ಆಗ್ರಾ ನಡುವಿನ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಮಂಜು ಮುಸುಕಿದ ವಾತಾವರಣದಿಂದಾಗಿ ಒಂದು ಡಬಲ್‌ ಡೆಕ್ಕರ್‌ ಬಸ್‌, ಕೋಳಿ ಸಾಗಿಸುವ ಲಾರಿ ಸೇರಿದಂತೆ ಆರು ವಾಹನಗಳು ಸರಣಿ ಢಿಕ್ಕಿ ಹೊಡೆದು, ಒಬ್ಬ ಸಾವಿಗೀಡಾಗಿದ್ದಾನೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಕನಿಷ್ಠ 24 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೊಂದೆಡೆ, ದಿಲ್ಲಿ- ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯ ಗ್ರೇಟರ್‌ ನೋಯ್ಡಾದ ದಯಾಂ ತ್‌ಪುರ ಗ್ರಾಮದಲ್ಲಿ 20 ಹೆಚ್ಚು ವಾಹನಗಳು ಸರಣಿ ಡಿಕ್ಕಿ ಹೊಡೆದಿವೆ. ಹೀಗಾಗಿ, ಕಾರು, ಟೆಂಪೋ ಮತ್ತು ಇತರ ವಾಹನಗಳು ಒಂದರ ಮೇಲೊಂದು ನಿಂತಿವೆ. ಇದರಿಂದಾಗಿ ಅಲ್ಲಿ ಹಲವು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನೋಯ್ಡಾದಿಂದ ಆಗ್ರಾ ಕಡೆಗೆ ತೆರಳುವ ಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಗ್ರೇಟರ್‌ ನೋಯ್ಡಾದ ಪೊಲೀಸರು ತಿಳಿಸಿದ್ದಾರೆ. ಬರೇಲಿಯಲ್ಲಿ ನಡೆದ ಅಫ‌ಘಾತದಲ್ಲಿ 2, ಪಶ್ಚಿಮ ಉತ್ತರ ಪ್ರದೇಶದ ಭಾಗ³ತ್‌ ಜಿಲ್ಲೆಯಲ್ಲಿ 2, ಉನ್ನಾವೋದ ಪಘಾತಗಳಲ್ಲಿ ಒಬ್ಬ ಅಸುನೀಗಿದ್ದಾನೆ.

ನೆರವು ನೀಡುವ ಬದಲು 1.5 ಲಕ್ಷ ಮೌಲ್ಯದ 500 ಕೋಳಿಗಳ ಸೆಳೆದೊಯ್ದ ಜನರು!
ದಟ್ಟ ಮಂಜಿನಿಂದಾಗಿ ದಿಲ್ಲಿ- ಆಗ್ರಾ ನಡುವಿನ ಹೆದ್ದಾರಿಯಲ್ಲಿ ವಾಹನಗಳ ಸರಣಿ ಅಪಘಾತ ಉಂಟಾಗಿತ್ತು. ಹೀಗೆ, ಅಪಘಾತಕ್ಕೆ ಈಡಾದ ವಾಹನದಲ್ಲಿ ಕೋಳಿ ಸಾಗಣೆಯ ಲಾರಿಯೂ ಇತ್ತು. ಗಾಯಗೊಂಡವರಿಗೆ ನೆರವು ನೀಡುವುದರ ಬದಲು ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಲಾರಿಯ ಮೇಲೆ ಹತ್ತಿ ಕೈಗೆ ಸಿಕ್ಕಿದಷ್ಟು ಕೋಳಿಗಳನ್ನು ತಮ್ಮ ತಮ್ಮ ಮನೆಗೆ ಕೊಂಡು ಹೋಗಿದ್ದಾರೆ. ಆ ಲಾರಿಯಲ್ಲಿ 1.5 ಲಕ್ಷ ರೂ. ಮೌಲ್ಯದ 500 ಕೋಳಿಗಳು ಇದ್ದವು. ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಆಗ್ರಾದಿಂದ ಕಾಸ್‌ಗಂಜ್‌ಗೆ ತೆರಳುತ್ತಿತ್ತು. ಕೋಳಿಗಳನ್ನು ಕೊಂಡೊಯ್ಯುವ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next