Advertisement

ವಿಟ್ಲ: ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನತೆ

12:46 PM Mar 31, 2019 | Team Udayavani |

ವಿಟ್ಲ: ಇಲ್ಲಿನ ಪೇಟೆಯ ಸಂತೆ ರಸ್ತೆಯ ಬದಿಯಲ್ಲಿ ಶನಿವಾರ ಸಂಜೆ ಭಾರೀ ಸ್ಫೋಟದ ಶಬ್ದ ಕೇಳಿದ್ದು, ಜನರು ಬೆಚ್ಚಿಬಿದ್ದರು. ಪರಿಸರದ ಕೆಲವು ವಾಹನ ಹಾಗೂ ಅಂಗಡಿಗಳ ಮೇಲೂ ಕಲ್ಲಿನ ಚೂರುಗಳು ಬಿದ್ದು, ಏಕಾಏಕಿ ಜನತೆ ಕಂಗಾಲಾಗಿದೆ.

Advertisement

ಸಂತೆ ರಸ್ತೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಹಲವು ದಿನಗಳಿಂದ ಕಟ್ಟಡ ನಿರ್ಮಾಣದ ಕಾಮಗಾರಿಯು ಪಟ್ಟಣ ಪಂಚಾಯತ್‌ ಪರವಾನಿಗೆ ಇಲ್ಲದೆ ನಡೆಯುತ್ತಿದೆ. ಸ್ಥಳದಲ್ಲಿರುವ ಕಪ್ಪುಕಲ್ಲೊಂದು ಕಾಮಗಾರಿಗೆ ಅಡ್ಡಿಯಾಗಿದ್ದು, ಅದನ್ನು ಹಿಟಾಚಿ ಬ್ರೇಕರ್‌ ಬಳಸಿ ತೆಗೆಯಲು ಪ್ರಯತ್ನಿಸಲಾಗಿತ್ತು. ಅದು ಸಫ‌ಲವಾಗಿರಲಿಲ್ಲ

ಬಳಿಕ ಬೇರೆ ರೀತಿಯಲ್ಲಿ ಕಲ್ಲನ್ನು ಒಡೆಯಲು ಪ್ರಯತ್ನಿಸ ಲಾಯಿತು. ಆಗ ಭಾರೀ ಶಬ್ದವಾಗಿದ್ದು, ಆಸುಪಾಸಿನ ಕಟ್ಟಡಗಳಲ್ಲಿ ಭೂಕಂಪನದಂಥ ಅನುಭವವಾಗಿ ನಾಗರಿಕರು ರಸ್ತೆಗೆ ಬಂದು ನಿಂತಿದ್ದರು.

ಸ್ಥಳೀಯ ವ್ಯಾಪಾರಿಗಳು ಹಾಗೂ ಕಟ್ಟಡ ಮಾಲಕರು ಪಟ್ಟಣ ಪಂಚಾಯತ್‌ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ದರು. ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ನೇತೃತ್ವದಲ್ಲಿ ಸ್ಥಳ ಪರಿ ಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ಬಳಸಿದ ಕುರುಹು ಪತ್ತೆಯಾಗಿಲ್ಲವೆನ್ನಲಾಗಿದೆ. ಸಂಬಂಧ ಪಟ್ಟವರು ಪಂಚಾಯತ್‌ ಪರವಾನಿಗೆ ಪಡೆಯದೆ ಕಾಮ ಗಾರಿ ಮುಂದುವರಿಸದಂತೆ ಎಚ್ಚರಿಕೆ ನೀಡಲಾಯಿತು. ಪಂಚಾಯತ್‌ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾ ರೆ.

Advertisement

Udayavani is now on Telegram. Click here to join our channel and stay updated with the latest news.

Next