Advertisement
ಗಂಭೀರ ಚಿಂತನೆಕ್ರಿಕೆಟ್ನ ಕೆಲವೊಂದು ನಿಯಮಗಳ ಬಗ್ಗೆ ಖಂಡಿತವಾಗಿಯೂ ಗಂಭೀರ ಚಿಂತನೆ ಹರಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ಆರಂಭಿಕ ರೋಹಿತ್ ಟ್ವೀಟ್ ಮಾಡಿದ್ದಾರೆ.
ಬೌಂಡರಿ ಕೌಂಟ್ ಮೂಲಕ ವಿಜೇತರನ್ನು ನಿರ್ಧರಿಸಿದ ಐಸಿಸಿ ನಿಯಮವನ್ನು ನಾನು ಒಪ್ಪುವುದಿಲ್ಲ. ಆದರೆ ನಿಯಮವೆಂದರೆ ನಿಯಮ. ಕೊನೆಗೂ ವಿಶ್ವಕಪ್ ಗೆದ್ದ ಇಂಗ್ಲೆಂಡಿಗೆ ಅಭಿನಂದನೆಗಳು. ಕೊನೆ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದ ಕಿವೀಸ್ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಯುವರಾಜ್ ಹೇಳಿದ್ದಾರೆ.
Related Articles
ನ್ಯೂಜಿಲ್ಯಾಂಡಿನ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಐಸಿಸಿಯನ್ನು ಜೋಕ್ ಎಂದು ಕರೆದಿದ್ದಾರೆ. ನೈಸ್ ವರ್ಕ್ ಎಟ್ ಐಸಿಸಿ… ಯು ಆರ್ ಎ ಜೋಕ್ ಎಂದು ಬರೆದಿದ್ದಾರೆ.
Advertisement
ಭಾರತೀಯ ಸ್ಪಿನ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಕೂಡ ಐಸಿಸಿ ನಿಯಮವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಕಲ್ಪನಾಶೂನ್ಯ ಐಸಿಸಿ ನಿಯಮವು ಇಂಗ್ಲೆಂಡ್ ವಿಶ್ವಕಪ್ ಗೆಲ್ಲಲು ನೆರವಾಗಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿದರೆ ಒಳ್ಳೆಯದಿತ್ತು.
ನ್ಯೂಜಿಲ್ಯಾಂಡ್ ಫೈನಲ್‌ನಲ್ಲಿ ಆ ರೀತಿಯಲ್ಲಿ ಅಮೋಘವಾಗಿ ಆಡಿತ್ತು. ಐಸಿಸಿ ಈ ಬಗ್ಗೆ ಆಲೋಚಿಸಲಿ ಎಂದು ಬೇಡಿ ಟ್ವೀಟ್ ಮಾಡಿದ್ದಾರೆ.
ನ್ಯಾಯೋಚಿತವಲ್ಲ: ಜೋನ್ಸ್ಡಿ-ಎಲ್ ನಿಯಮದಲ್ಲಿ ತಂಡ ಗಳಿಸಿದ ರನ್ ಮತ್ತು ಕಳೆದುಕೊಂಡ ವಿಕೆಟ್‌ಗಳನ್ನು ಪರಿಗಣಿಸಲಾಗುತ್ತದೆ. ಆದರೆ ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶವನ್ನು ಕೇವಲ ಬೌಂಡರಿಗಳ ಆಧಾರದಲ್ಲಿ ನಿರ್ಧರಿಸಿರುವುದು ನ್ಯಾಯೋಚಿತವಲ್ಲ ಎಂದು ಆಸ್ಟ್ರೇಲಿ ಯದ ಮಾಜಿ ಆಟಗಾರ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.