Advertisement

1569ರಲ್ಲಿ ಸ್ವರ್ಗಸ್ಥರಾದ ಕೆಂಪೇಗೌಡರು

03:47 PM Jun 27, 2017 | |

ತಮ್ಮ ಹಿರಿಯರಂತೆ ಹರಿ-ಹರ ಇಬ್ಬರನ್ನೂ ಪೂಜಿಸುತ್ತಿದ್ದ ಕೆಂಪೇಗೌಡರು ಜನರನ್ನು ಆಳುವ ಅರಸ ಎನಿಸಿಕೊಳ್ಳುವುದಕ್ಕಿಂತ ನಾಡ ಅಭಿವೃದ್ಧಿಯ ಬಗೆಗೆ ಹೆಚ್ಚು ಗಮನ ನೀಡುತ್ತಿದ್ದರು. 1531ರಿಂದ 1569ರವರೆಗೆ ಬಹು ಪರಿಣಾಮಕಾರಿಯಾದ ಆಡಳಿತವನ್ನು ನಡೆಸಿದರು.

Advertisement

ವಿಜಯನಗರದ ಅರಸರ ಅನುಮತಿ ಇಲ್ಲದೆ ನಾಣ್ಯ ಠಂಕಿಸಿ ಸೆರೆಮನೆ ವಾಸ ಅನುಭವಿಸಿದ ಅಂಶವೊಂದನ್ನು ಹೊರತುಪಡಿಸಿದರೆ ತಮ್ಮ ಆಡಳಿತ ಅವಧಿಯಲ್ಲಿ ಇನ್ನಾವ ತಪ್ಪುಗಳನ್ನು ಅವರು ಎಸಗಲಿಲ್ಲ. ಅಧೀನ ಅರಸರಾದರೂ ಅಮೋಘವಾಗಿ ಪ್ರಜಾಪ್ರೀತಿ ಗಳಿಸಿ 1569ರಲ್ಲಿ ಅಸುನೀಗಿದರು.  ನಂತರ ಇವರ ಮಗ ಗಿಡ್ಡೇಗೌಡ ಕ್ರಿ ಶ 1578 ರವರೆಗೆ ಆಳಿದನೆಂದು ಹೇಳಲಾಗುತ್ತದೆ.

ಈ ಮೊದಲು ಕೆಂಪೇಗೌಡರು ತಮ್ಮ ಕೊನೆಯ ದಿನಗಳನ್ನು ಶಿವಗಂಗೆಯಲ್ಲಿ ಕಳೆದು ಅಲ್ಲಿಯೇ ಕೊನೆಯುಸಿರೆಳದರೆಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಂಪೇಗೌಡರ ಸಮಾಧಿಯೊಂದು ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಇದೆಯೆಂದು ಸಂಶೋಧಕರು ಗುರುತಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಇದನ್ನು ಒಪ್ಪಿದ್ದು, ಈ ಶೋಧಿತ ಸಮಾಧಿ ಇತಿಹಾಸಕಾರರ ಗಮನ ಸೆಳೆದಿದೆ.

ಹುಲಿಕಲ್‌ನಲ್ಲಿ ಪಾಳೇಗಾರರ ಅರಮನೆ: ಕೆಂಪೇಗೌಡರ ವಂಶಸ್ಥರಾದ ಪಾಳೇಗಾರರು ಬಾಳಿ ಬದುಕಿದ್ದ ಹುಲಿಕಲ್‌ ಪಾಳೇಗಾರರ ಭವ್ಯ ಅರಮನೆ ಇಂದು ವಿನಾಶದ ಅಂಚಿ ನಲ್ಲಿದೆ. ನಾಗರಿಕತೆಯ ಉದಯಕ್ಕೆ ಕಾರಣವಾದ ಭೂಮಿ ಮಾನವನ ಜೀವನೋಪಾಯಕ್ಕೆ ಮಾರ್ಗದರ್ಶಿ. ಅಂತಹ ಭೂಮಿಯೊಂದಿಗೆ ಮಾನವನ ಸಂಬಂಧಗಳು ಬೆಸೆಯತೊಡಗಿದಂತೆ ನಾಗರಿಕತೆ ಬೆಳೆಯಿತು.

ಮಾಗಡಿಯಾದ್ಯಂತ ಇರುವ ಇಮ್ಮಡಿ, ಮುಮ್ಮಡಿ ಕೆಂಪೇಗೌಡರ ಕಾಲದ ಶಿಲಾಶಾಸನಗಳು, ಆಯುಧಗಳು, ಅರಮನೆ, ಗುರುಮನೆ, ಸೆರೆಮನೆ, ದೇವಮಂದಿರಗಳು ಇಂದು ಶಿಥಿಲಾವಸ್ಥೆಗೆ ತಲುಪಿವೆ. ಹುಲಿಕಲ್‌ ಪಾಳೇಗಾರರಾದ ದೊಡ್ಡವೀರಪ್ಪ, ಕೆಂಪವೀರಪ್ಪ, ಹೊನ್ನಪ್ಪ, ವೆಂಕಣ್ಣ, ಗಿರಿಯಪ್ಪ, ಮುದ್ದಪ್ಪ, ರಂಗಪ್ಪ, ಅಳಿಯ ಚಿಕ್ಕಪ್ಪಯ್ಯ ಇತರರು ಕ್ರಿ.ಶ.1634ರಿಂದ 1805ರವರೆಗೆ ಆಡಳಿತ ನಡೆಸಿದ ದಾಖಲೆಗಳಿವೆ.

Advertisement

1728ರಲ್ಲಿ ಕೆಂಪವೀರಪ್ಪನನ್ನು ನೆಲೆಪಟ್ಟಣದಲ್ಲಿ ಬಂಧಿಸಿ ಪುದುವಟ್ಟಾಗಿದ್ದ ಲಕ್ಷಿಪುರದ ಮಾರ್ಗವಾಗಿ ಶ್ರೀರಂಗ ಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಡ ಲಾಯಿತು. ಆತನ ತಾಯಿ ಮುದ್ದುವೀರಮ್ಮ, ತನ್ನ ಮಗ ಮೈಸೂರು ಅರಸರ ಸೆರೆಯಾಗಿರುವುದನ್ನು ಕಂಡು ಅಗ್ನಿಪ್ರವೇಶ ಮಾಡಿದಳೆಂದು ಇಂದಿಗೂ ಶಿರಸ್ತಮ್ಮ ಎಂಬ ತಲೆಯ ಭಾಗವನ್ನು ಶಿಲೆಯಲ್ಲಿ ಕೆತ್ತಿ ಪೂಜಿಸಲಾಗುತ್ತಿದೆ.

ಕೆಂಪವೀರಪ್ಪ ಬಂಧನದಲ್ಲಿದ್ದಾಗ ತಮ್ಮ ಸೋದರ ಸಂಬಂಧಿ ಹುಲಿಕಲ್‌ ಪಾಳೇಗಾರ ಮುದ್ದು ಕೃಷ್ಣ ರಾಜನಿಗೆ ಬರೆದಿರುವ ತಾಳೆಗರಿ ಪತ್ರಗಳು ಲಭಿಸಿವೆ. ಇದು ಕೆಂಪವೀರಪ್ಪನಿಗೆ ಸಂಬಂಧಿಸಿದ ಕಡೆಯ ದಾಖಲೆಯಾಗಿದೆ. ಮೈಸೂರು ಮಹಾರಾಜರು ಪ್ರಾಂತ್ಯಕ್ಕೊಬ್ಬರಂತೆ ಪಾಳೇಗಾರರನ್ನು ನೇಮಿಸುತ್ತಿದ್ದರು. ಹಾಗೆಯೇ ಈ ವಂಶದ ಭಾದ್ಯರಾಗಿ ಹುಲಿಕಲ್‌ನಲ್ಲಿ ಪಾಳೇಗಾರರನ್ನು ನಿಯೋಜಿಸಲಾಗಿದೆ.

ಈ ವಂಶದ ಗಿರಿಯಪ್ಪನಿಗೆ ಗಂಡು ಸಂತಾನ ಇಲ್ಲದ ಕಾರಣ ತಮಿಳುನಾಡಿನ ಕೃಷ್ಣಗಿರಿ ಬಳಿಯ ಜೋಗಿಹಟ್ಟಿಯ ಚಿಕ್ಕಪ್ಪಯ್ಯನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಹುಲಿಕಲ್‌ನÇÉೇ ಉಳಿದುಕೊಂಡ ಚಿಕ್ಕಪ್ಪಯ್ಯ ಸಂಸ್ಥಾನದ ಪಾಳೇಗಾರರಿಗೆ ಸಂಬಂಧಿಸಿದ ದಾಖಲೆಗಳನ್ನು ಪುರಾತತ್ವ ಇಲಾಖೆಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next