Advertisement
Related Articles
Advertisement
ಬೋಟಿಂಗ್ ಉಂಟು
ಹೊಗೇನಕಲ್ ಜಲಪಾತ ವಿಶೇಷ ಎಂದರೆ, ಇಲ್ಲಿ ಬೋಟಿಂಗ್ ಕೂಡ ಉಂಟು. ವಿವಿಧ ಕೋನಗಳಲ್ಲಿ ಕಲ್ಲು ಬಂಡೆಗಳ ನಡುವೆ ದುಮ್ಮಿಕ್ಕುವ ನೀರನ್ನು ಬೋಟ್ ಮೂಲಕ ನೋಡಬಹುದು. ಅಷ್ಟೇ ಅಲ್ಲ, ಜಲಪಾತದ ಪಾದವನ್ನು ಮುಟ್ಟಿ ಬರಬಹುದು. ನದಿಯ ದಡದ ಬೋಟ… ನಿಲ್ಲುವ ಸ್ಥಳಕ್ಕೆ ಮತ್ತು ಜಲಪಾತದ ನೀರು ಬೀಳುವ ಸ್ಥಳಕ್ಕೆ ಸುಮಾರು ಒಂದು ಕಿಲೋಮೀಟರ್ ದೂರವಿದೆ. ಇಲ್ಲಿನ ಬೋಟ್ ಚಾಲಕರು ವಿವಿಧ ತಂಡಗಳಲ್ಲಿ ಗರಿಷ್ಠ ಒಂದು ಬೋಟ್ ಒಳಗೆ ನಾಲ್ಕು ಮಂದಿಯಂತೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಾರೆ. ಈ ಜಲಪಾತದ ಸುತ್ತಮುತ್ತ ಇರುವ ಬಂಡೆ ಕಲ್ಲುಗಳು, ದಕ್ಷಿಣ ಏಷ್ಯಾದÇÉೇ ಅತ್ಯಂತ ಪುರಾತನ ಕಾಲದ ಕಾಬೊìನೇಟೆಡ್ ಕಲ್ಲುಗಳಂತೆ.
ಇಲ್ಲಿನ ವಿಭಿನ್ನವಾದ ಕಪ್ಪು ಬಣ್ಣದ ಕಲ್ಲುಗಳು ವಿಶಿಷ್ಟ ಆಕಾರ ಹೊಂದಿದೆ. ಧುಮುಕುವ ನೀರು ಕೆತ್ತಿದ ಕಲಾಕೃತಿಗಳೇ ಆಗಿವೆ. ಜಲಪಾತದ ವೇಗಕ್ಕೆ ಉಂಟಾದ ಕಲ್ಲಿನ ಕಲಾಕೃತಿಗಳನ್ನು ಜಲಪಾತದ ತಳಭಾಗಕ್ಕೆ ತೆರಳಿ ನೋಡುವುದೇ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಜಲಪಾತದ ನೀರು ಬೀಳುವ ಸ್ಥಳದಿಂದ ಸುಮಾರು ಇಪ್ಪತ್ತು ಮೀಟರ್ ದೂರದವರೆಗೆ ಹೊಗೆಯಂತಹ ಇಬ್ಬನಿಯು ಎಲ್ಲರನ್ನೂ ಆಕರ್ಷಿಸುತ್ತದೆ.
ಈ ನದಿಯು ಗುಡ್ಡಗಾಡು ಪ್ರದೇಶ ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಬಂದು ವಿಶಾಲವಾದ ಮರಳುಗಳಿಂದ ಕೂಡಿದ ದಿನ್ನೆಯನ್ನು ಹುಟ್ಟುಹಾಕಿದೆ. ಈ ಮರಳಿನಲ್ಲಿ ಆಟವಾಡುವುದು ಪ್ರವಾಸಿಗರಿಗೆ ವಿನೋದವನ್ನು ನೀಡುತ್ತದೆ.
ಮಳೆಗಾಲದಲ್ಲಿ ಇಲ್ಲಿ ಪ್ರವಾಹ ಪರಿಸ್ಥಿತಿ ಇರುತ್ತದೆ. ಈ ಸಂದರ್ಭದಲ್ಲಿ ಕಲ್ಲಿನ ಸಂದಿಗಳ ನಡುವೆ ತೆಪ್ಪಗಳು ಸುಲಲಿತವಾಗಿ ತೆರಳಲು ಕಷ್ಟವಾಗಬಹುದು. ಹಾಗಾಗಿ, ಮಳೆಗಾಲದ ದಿನಗಳಲ್ಲಿ ನುರಿತ ಬೋಟ್ ಚಾಲಕರ ಸಹಕಾರದೊಂದಿಗೆ ಮಾತ್ರ ತೆಪ್ಪದಲ್ಲಿ ಜಲಪಾತದ ತಳಭಾಗಕ್ಕೆ ತೆರಳಲು ಅವಕಾಶವಿದೆ. ಪ್ರಯಾಣಿಕರನ್ನು ಕರೆದೊಯ್ಯಲು ಬಳಕೆಯಾಗುವ ಹರಿಗೋಲು ಸುಮಾರು 2.5 ಮೀ ಉದ್ದವಿದ್ದು ಮತ್ತು ಅಷ್ಟೇ ಅಗಲ ಇರುತ್ತದೆ. ಇದನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಕೇವಲ ಒಂದು ದಿನದಲ್ಲಿ ಬಿದಿರಿನಿಂದ ದೋಣಿ ಹಾಗೂ ಹರಿಗೋಲನ್ನು ಇಲ್ಲಿನ ಅಂಬಿಗರು ಸಿದ್ಧಪಡಿಸುತ್ತಾರೆ. ಈ ದೋಣಿಗಳ ತಳಭಾಗ ನೀರು ನಿರೋಧಕವಾಗಿದೆ. ಹರಿಗೋಲಿನ ತಳಭಾಗವನ್ನು ಪ್ರಾಣಿಗಳ ತೊಗಲಿನಿಂದ ಮುಚ್ಚುವ ಪರಿಪಾಠವಿದೆ. ಕೆಲವೊಮ್ಮೆ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಿರುತ್ತಾರೆ. ಈ ಜಲಪಾತದ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದು, ಇಲ್ಲಿನ ದೋಣಿಗಳ ತಳಭಾಗವನ್ನು ಪ್ಲಾಸ್ಟಿಕ್ ಇಂದ ಮುಚ್ಚುವುದಕ್ಕೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.
ಲೈಫ್ ಜಾಕೆಟ್ ಉಂಟು
ಸುರಕ್ಷತತೆಯ ದೃಷ್ಟಿಯಿಂದ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿಕೊಂಡೇ ಕುಳಿತುಕೊಳ್ಳಬೇಕೆಂಬ ನಿಯಮವಿದೆ. ಇಲ್ಲಿನ ದೋಣಿಗಳು ನೋಡಲು ವೃತ್ತಾಕಾರದಿಂದ ಕೂಡಿವೆ. ಜಲಪಾತದ ತಳಭಾಗಕ್ಕೆ ದೋಣಿಗಳು ತಲುಪುತ್ತಿದ್ದಂತೆ ಅಂಬಿಗರು ದೋಣಿಯನ್ನು ಅತ್ಯಂತ ವೇಗವಾಗಿ ತಮ್ಮ ಹರಿಗೋಲಿನ ಮೂಲಕ ದೋಣಿಯನ್ನು ವೃತ್ತಾಕಾರದಲ್ಲಿ ತಿರುಗಿಸುವ ಮೂಲಕ ಪ್ರವಾಸಿಗರಿಗೆ ಖುಷಿ ಮತ್ತು ರೋಮಂಚನ ಉಂಟು ಮಾಡುತ್ತಾರೆ. ಜಲಪಾತದ ಕಲ್ಲು ಬಂಡೆಗಳ ಮಧ್ಯೆ ನೀರನ್ನು ಸೀಳುತ್ತ ಸಾಗುವಾಗ ವಿವಿಧ ಕೋನಗಳಲ್ಲಿ ಪ್ರವಾಸಿಗರು ತಮ್ಮ ಮೊಬೈಲ… ಹಾಗೂ ಕ್ಯಾಮೆರಾಗಳ ಮೂಲಕ ಫೋಟೋಗಳನ್ನು ಚಿತ್ರೀಕರಿಸಿಕೊಳ್ಳಬಹುದು. ಆದರೆ ಜಲಪಾತದ ತಳಭಾಗಕ್ಕೆ ತಲುಪುವ ಸಂದರ್ಭದಲ್ಲಿ ಜಲಪಾತದ ನೀರು ದೋಣಿಯ ಮೇಲಕ್ಕೂ ಬೀಳುವುದರಿಂದ ಕ್ಯಾಮೆರಾವನ್ನು ಹೆಚ್ಚು ಸುರಕ್ಷಿ$ತವಾಗಿಟ್ಟುಕೊಳ್ಳುವುದು ಅಗತ್ಯ.
ಈ ಜಲಪಾತದ ದೋಣಿ ವಿಹಾರ ಸಾಗುವ ದಾರಿಯಲ್ಲಿಯೇ, ಮೀನುಗಾರರು ಮೀನನ್ನು ಹಿಡಿದು ಅÇÉೇ ವಿಶೇಷ ಖಾದ್ಯದಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ.
ಹೊಗೇನಕಲ್ ಫಾಲ್ಸ್ ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ವೈಶಿಷ್ಟ್ಯಪೂರ್ಣ ಜಲಪಾತವೆಂದು ಹೆಸರು ಪಡೆದಿದೆ.
ಸಂತೋಷ್ ರಾವ್ ಪೆರ್ಮುಡ